ಮಂಗಳೂರು : ಮಾ.12ರಂದು 'ಆಪಿಸ್ ಕ್ಲಿನಿಕ್ಸ್' ಉದ್ಘಾಟನೆ
ಮಂಗಳೂರು : ವಿಶ್ವ ಕಿಡ್ನಿ ದಿನವಾದ ಮಾ.12ರಂದು ವಿನೂತನ ಸೌಲಭ್ಯಗಳನ್ನು ಹೊಂದಿರುವ 'ಆಪಿಸ್ ಕ್ಲಿನಿಕ್ಸ್' ನಗರದಲ್ಲಿ ಉದ್ಘಾಟನೆಯಾಗಲಿದೆ.
ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ರೋಗಗಳನ್ನು ತಡೆಯುವ ಜನಜಾಗೃತಿ ಅಭಿಯಾನ ಯೋಜನೆಯನ್ನು ಆಪಿಸ್ ಕಿಡ್ನಿ ಫೌಂಡೇಶನ್ ಹಮ್ಮಿಕೊಂಡಿದ್ದು, ನಗರದ ಫಳ್ನೀರ್ ರಸ್ತೆಯಲ್ಲಿರುವ ಫಳ್ನೀರ್ ಹೆಲ್ತ್ ಸೆಂಟರ್ ಕಟ್ಟಡದಲ್ಲಿ ಅಂದು ಬೆಳಗ್ಗೆ 10ಕ್ಕೆ ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ ಆಪಿಸ್ ಕ್ಲಿನಿಕ್ಸ್ ಸಂಕೀರ್ಣ ಉದ್ಘಾಟಿಸಲಿದ್ದಾರೆ.
ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆಪಿಸ್ ಕ್ಲಿನಿಕ್, ಡಾ. ಸಿ.ಪಿ. ಹಬೀಬ್ ರಹ್ಮಾನ್ ಆಪಿಸ್ ರೋಗ ತಪಾಸನಾ ಕೇಂದ್ರ, ಡಾ. ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಆಪಿಸ್ ಔಷಧ ವಿಭಾಗ, ಡಾ. ಅಬ್ದುಲ್ ಮಜೀದ್ ಆಪಿಸ್ ಕಿರು ಶಸ್ತ್ರ ಚಿಕಿತ್ಸಾ ವಿಭಾಗ ಹಾಗೂ ಡಾ. ನವೀಶಾ ಲತೀಫ್ ಆಪಿಸ್ ಕನ್ನಡಕ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಆಪಿಸ್ ಕ್ಲಿನಿಕ್ಸ್ ನಲ್ಲಿ ಮಹಿಳೆ ಮತ್ತು ಮಕ್ಕಳ ವಿಭಾಗ ಹಾಗೂ ಚರ್ಮ, ಹೃದಯ, ಆನ್ಕಾಲಜಿ ಮತ್ತು ಪ್ರೊಕ್ಟಾಲಜಿ ಚಿಕಿತ್ಸಾ ವಿಭಾಗಗಳಿದ್ದು ನುರಿತ ವೈದ್ಯರ ಸೇವೆಗಳು ಲಭ್ಯವಿರುತ್ತವೆ.
ಆಪಿಸ್ ಇನ್‍ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸಾಯನ್ಸ್ ಶಿಕ್ಷಣ ಕೇಂದ್ರವನ್ನೂ ಆರಂಭಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಆಪಿಸ್ ಕ್ಲಿನಿಕ್ಸ್ ಆಡಳಿತ ನಿರ್ದೇಶಕ, ಮೂತ್ರರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಮುಹಮ್ಮದ್ ಸಲೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.