×
Ad

ಡೇ ನಲ್ಮ್ ಯೋಜನೆಯಡಿ ಮಹಿಳಾ ದಿನಾಚರಣೆ

Update: 2020-03-11 20:10 IST

ಮಂಗಳೂರು, ಮಾ.11: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಮತ್ತು ಮಂಗಳೂರು ಮಹಾ ನಗರಪಾಲಿಕೆ ವತಿಯಿಂದ ಡೇ-ನಲ್ಮ್ ಯೋಜನೆಯಡಿ ಅಂತರ್‌ರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಯಿತು.

ಉಪ ಮೇಯರ್ ವೇದಾವತಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಪೊರೇಟರ್ ಶಕೀಲಾ ಕಾವ ಅಧ್ಯಕ್ಷತೆ ವಹಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಜುಳಾ ಸನೀಲ್ ‘ಲಿಂಗ ತಾರತಮ್ಯ ಮತ್ತು ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದರು. ಸ್ವ-ಸಹಾಯ ಗುಂಪುವಿನ ಉತ್ತೇಜನದಿಂದಾಗಿ ಯಶಸ್ಸಿನ ಮಹಿಳೆಯಾಗಿ ಹೊರ ಹೊಮ್ಮಿದ ಡಾ. ಸಂಶಾದ್ ಮತ್ತು ಕ್ರೀಡಾಪಟು ನಿರ್ಮಲಾ ಎಯ್ಯಿಡಿ ಅವರನ್ನು ಸನ್ಮಾನಿಸಲಾಯಿತು.

ಮನಪಾ ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಉಪಾಯುಕ್ತ ಡಾ.ಸಂತೋಷ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News