×
Ad

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವಾರ್ಷಿಕ ಮಹಾಸಭೆ

Update: 2020-03-11 21:35 IST

ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇದರ  ವಾರ್ಷಿಕ ಮಹಾಸಭೆಯು ಅಲ್ ಮದೀನ ಹಾಲ್ ತಿಬ್ಲಪದವಿನಲ್ಲಿ ಡಿವಿಶನ್ ನಾಯಕ ರಝ್ಝಾಕ್ ಸಅದಿ ದುಆ ಮೂಲಕ ಡಿವಿಷನ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಙಳ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯನ್ನು ಎಸ್ಸೆಸ್ಸೆಫ್ ದ.ಕ ವೆಸ್ಟ್ ಝೊನ್ ಅಧ್ಯಕ್ಷ  ಮುನೀರ್ ಅಹ್ಮದ್ ಕಾಮಿಲ್  ಸಖಾಫಿ ಉಳ್ಳಾಲ ಉದ್ಘಾಟಿಸಿದರು. ಡಿವಿಷನ್ ಮಹಾಸಭೆಯ ವೀಕ್ಷಕರಾಗಿ ವೆಸ್ಟ್ ಝೊನ್ ನಾಯಕರಾದ ನವಾಝ್ ಸಖಾಫಿ, ಮನ್ಸೂರ್ ಬಜಾಲ್ ಆಗಮಿಸಿದ್ದರು. ವಾರ್ಷಿಕ ವರದಿಯನ್ನು ಡಿವಿಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ತಲಪಾಡಿ ವಾಚಿಸಿದರು.

ಕ್ಯಾಂಪಸ್ ವರದಿಯನ್ನು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಲ್ತಾಫ್ ಕಲ್ಪಾದೆ ವಾಚಿಸಿದರು. ಎಸ್ಸೆಸ್ಸೆಫ್ ದ ಕ ಜಿಲ್ಲಾ ಕೋಶಾಧಿಕಾರಿ ಮುಹಮ್ಮದ್ ಅಲೀ ತುರ್ಕಳಿಕೆ ಮಾತನಾಡಿದರು.

2019-20ನೇ ಸಾಲಿನ ಸಮಿತಿಯನ್ನು ಬರ್ಕಾಸ್ತುಗೋಳಿಸಿ ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ಇರ್ಫಾನ್ ನೂರಾನಿ,  ಉಪಾಧ್ಯಕ್ಷರಾಗಿ ಜುನೈದ್ ಸಖಾಫಿ, ಇಸ್ಮಾಯಿಲ್ ತಲಪಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಾಫರ್ ಯು ಎಸ್,  ಕಾರ್ಯದರ್ಶಿಯಾಗಿ ಅನ್ವೀಝ್ ತಲಪಾಡಿ, ಸುಹೈಲ್ ದೇರಳಕಟ್ಟೆ, ಕೋಶಾಧಿಕಾರಿಯಾಗಿ ಸಿರಾಜುದ್ದೀನ್ ತಲಪಾಡಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮೊಹಮ್ಮದ್ ಆಶಿಕ್ ಹಾಗೂ 17 ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು  ಆಯ್ಕೆಮಾಡಲಾಯಿತು.

ಎಸ್ಸೆಸ್ಸೆಫ್ ದ ಕ ಜಿಲ್ಲಾ ಉಪಾಧ್ಯಕ್ಷ ತೌಸೀಫ್ ಸಅದಿ, ವೆಸ್ಟ್ ಝೊನ್ ನಾಯಕರಾದ ಇಲ್ಯಾಸ್ ಪೊಟ್ಟೊಲಿಕೆ, ಶರೀಫ್ ಮುಡಿಪು, ಮುಡಿಪು ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಅಬೂಸ್ವಾಲಿಹ್ ಹರೇಕಳ ಉಪಸ್ಥಿತರಿದ್ದರು.

ಡಿವಿಷನ್ ಕಾರ್ಯದರ್ಶಿ ಹಮೀದ್ ತಲಪಾಡಿ ಸ್ವಾಗತಿಸಿ,  ಜಾಫರ್ ಯು ಎಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News