ಇಟಲಿ: ಸಾವಿನ ಸಂಖ್ಯೆ 631ಕ್ಕೆ
Update: 2020-03-11 22:21 IST
ರೋಮ್ (ಇಟಲಿ), ಮಾ. 11: ಇಟಲಿಯಲ್ಲಿ ದೇಶಾದ್ಯಂತ ಹಾಕಲಾಗಿರುವ ಬೀಗಮುದ್ರೆ ಎರಡನೇ ದಿನವಾದ ಬುಧವಾರವೂ ಮುಂದುವರಿದಿದೆ. ಅದೇ ವೇಳೆ, ಮಾರಕ ಕಾಯಿಲೆ ಕೊರೋನವೈರಸನ್ನು ನಿಯಂತ್ರಿಸುವುದಕ್ಕಾಗಿ ಅಮೆರಿಕದ ನ್ಯೂಯಾರ್ಕ್ ನಗರವು ನ್ಯಾಶನಲ್ ಗಾರ್ಡ್ ಸೈನಿಕರನ್ನು ನಿಯಂತ್ರಿಸಿದೆ.
ಯುರೋಪ್‌ನ ಅತ್ಯಂತ ಪೀಡಿತ ದೇಶ ಇಟಲಿಯಲ್ಲಿ ಕೊರೋನವೈರಸ್‌ನಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ ಮಂಗಳವಾರ 631ಕ್ಕೆ ಏರಿದೆ.
ಚೀನಾದಲ್ಲಿ ರೋಗದ ತೀವ್ರತೆಯು ನಿಧಾನವಾಗಿ ಕಡಿಮೆಯಾಗುತ್ತಿದ್ದರೆ, ಅದರ ಹೊರ ಜಗತ್ತಿನಲ್ಲಿ ಸೋಂಕು ಪೀಡಿತರ ಮತ್ತು ಸತ್ತವರ ಸಂಖ್ಯೆ ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರುತ್ತಿದೆ.
ಮಧ್ಯ ಅಮೆರಿಕದಲ್ಲಿ ಕೊರೋನವೈರಸ್ ಪ್ರಥಮ ಬಲಿ ಪಡೆದುಕೊಂಡಿದೆ. ಪನಾಮದಲ್ಲಿ ಮಂಗಳವಾರ 64 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದಾರೆ.