ಅಮೆರಿಕ ರಕ್ಷಣಾ ಕಾರ್ಯದರ್ಶಿಯ ಭಾರತ ಭೇಟಿ ಮುಂದೂಡಿಕೆ

Update: 2020-03-11 16:56 GMT

ವಾಶಿಂಗ್ಟನ್, ಮಾ. 11: ನೋವೆಲ್-ಕೊರೋನವೈರಸ್ ಕಾಯಿಲೆಯು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ವಾರ ಭಾರತಕ್ಕೆ ನೀಡಲಿರುವ ಭೇಟಿಯನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಮುಂದೂಡಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮಂಗಳವಾರ ತಿಳಿಸಿದೆ.

ಅವರು ಮಾರ್ಚ್ 16ರಿಂದ 20ರ ನಡುವೆ ಭಾರತ, ಪಾಕಿಸ್ತಾನ ಮತ್ತು ಉಝ್ಬೆಕಿಸ್ತಾನಕ್ಕೆ ಭೇಟಿ ನೀಡಬೇಕಾಗಿತ್ತು. ಆದರೆ, ಕೋವಿಡ್-19 ಕಾಯಿಲೆಯು ವೇಗವಾಗಿ ಜಗತ್ತಿನೆಲ್ಲೆಡೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲೇ ಉಳಿಯಲು ಅವರು ನಿರ್ಧರಿಸಿದ್ದಾರೆ ಎಂದು ಪೆಂಟಗನ್ ವಕ್ತಾರೆ ಅಲಿಸಾ ಫರಾ ಹೇಳಿದ್ದಾರೆ.

ಅಮೆರಿಕ ಸೇನೆಯನ್ನು ಬಾಧಿಸದ ಕೊರೋನವೈರಸ್

ಕೊರೋನವೈರಸ್ ಸಾಂಕ್ರಾಮಿಕವು ಅಮೆರಿಕದ ಸೇನೆಯನ್ನು ಹೆಚ್ಚಾಗಿ ಬಾಧಿಸಿಲ್ಲ. ವಿಶ್ವಾದ್ಯಂತ ನಿಯೋಜಿಸಲ್ಪಟ್ಟಿರುವ ಅಮೆರಿಕದ ಸೈನಿಕರ ಪೈಕಿ ಕೇವಲ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಆದರೆ, ಪೆಂಟಗನ್ ಪ್ರಧಾನಕಚೇರಿಯನ್ನು ಸೋಂಕುಮುಕ್ತವಾಗಿರಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಪೆಂಟಗನ್ ಪ್ರಧಾನಕಚೇರಿಯಲ್ಲಿ ಪ್ರತಿ ದಿನ 20,000 ಸೇನಾ ಮತ್ತು ನಾಗರಿಕ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News