ಕೊರೋನವೈರಸ್‌ನಿಂದ ನಿರಾಶ್ರಿತರ ರಕ್ಷಣೆಗಾಗಿ ನೆರವು ನೀಡಲು ವಿಶ್ವಸಂಸ್ಥೆ ಮನವಿ

Update: 2020-03-11 16:58 GMT
Photo: twitter.com/UN/photo

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮಾ. 11: ಮಾರಕ ನೂತನ-ಕೊರೋನವೈರಸ್ ಕಾಯಿಲೆಗೆ ಸುಲಭವಾಗಿ ಗುರಿಯಾಗಬಹುದಾದ ನಿರಾಶ್ರಿತರನ್ನು ರಕ್ಷಿಸಲು 33 ಮಿಲಿಯ ಡಾಲರ್ (ಸುಮಾರು 243 ಕೋಟಿ ರೂಪಾಯಿ) ತುರ್ತು ನೆರವಿಗಾಗಿ ವಿಶ್ವಸಂಸ್ಥೆ ಮಂಗಳವಾರ ಮನವಿ ಮಾಡಿದೆ.

ಕೋವಿಡ್-19 ಕಾಯಿಲೆಯ ಹಿನ್ನೆಲೆಯಲ್ಲಿ, ನಿರಾಶ್ರಿತರ ತುರ್ತು ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಈಡೇರಿಸುವುದಕ್ಕಾಗಿ 33 ಮಿಲಿಯ ಡಾಲರ್ ಆರಂಭಿಕ ಮೊತ್ತದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ತಿಳಿಸಿದೆ.

ಈವರೆಗೆ ನಿರಾಶ್ರಿತರು ಮತ್ತು ಆಶ್ರಯ ಕೋರಿಕೆದಾರರಲ್ಲಿ ಈ ರೋಗ ಹರಡಿರುವ ವರದಿಗಳಿಲ್ಲ.

ಆದರೆ, ಜಗತ್ತಿನಲ್ಲಿ ಈ ರೋಗಕ್ಕೆ ಸುಲಭವಾಗಿ ಗುರಿಯಾಗಬಹುದಾಗಿರುವವರನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ (ಯುಎನ್‌ಎಚ್‌ಸಿಆರ್) ಫಿಲಿಪೊ ಗ್ರಾಂಡಿ ಹೇಳಿದ್ದಾರೆ. ಹೆಚ್ಚಿನ ಪ್ರಕರಣಗಳಲ್ಲಿ ಕೊರೋನವೈರಸ್ ರೋಗವು ಸೂಕ್ಷ್ಮ ರೋಗಲಕ್ಷಣಗಳನ್ನು ತೋರಿಸುತ್ತದೆ. ಆದರೆ, ಅತ್ಯಂತ ದುರ್ಬಲ ವ್ಯಕ್ತಿಗಳಲ್ಲಿ ಇವುಗಳು ಗಂಭೀರ ಕಾಯಿಲೆಗಳಾಗಿ ಪರಿವರ್ತನೆ ಹೊಂದುತ್ತವೆ ಹಾಗೂ ಸಾವು ಸಂಭವಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News