×
Ad

ಚೀನಾದಲ್ಲಿ ಕಡಿಮೆಯಾಗುತ್ತಿರುವ ಕೊರೋನವೈರಸ್ ತೀವ್ರತೆ

Update: 2020-03-11 22:29 IST

ಬೀಜಿಂಗ್, ಮಾ. 11: ಚೀನಾದ ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದು ವುಹಾನ್‌ಗೆ ದೇಶದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿ ನೀಡಿದ ಒಂದು ದಿನದ ಬಳಿಕ, ದೇಶದ ಹೆಚ್ಚೆಚ್ಚು ಸ್ಥಳಗಳಲ್ಲಿ ಕೊರೋನವೈರಸ್ ನಿಯಂತ್ರಣಕ್ಕಾಗಿ ಹೇರಲಾಗಿದ್ದ ನಿರ್ಬಂಧಗಳು ಹಾಗೂ ಪ್ರಯಾಣ ನಿರ್ಬಂಧಗಳನ್ನು ಸಡಿಲುಗೊಳಿಸಲಾಗಿದೆ.

ಚೀನಾದಲ್ಲಿ ಕೋವಿಡ್-19 ರೋಗದ ತೀವ್ರತೆ ಕಡಿಮೆಯಾಗಿರುವುದನ್ನು ಇದು ಸೂಚಿಸಿದೆ.

ಮಂಗಳವಾರ ಚೀನಾದಲ್ಲಿ ಹೊಸದಾಗಿ 24 ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಂಖ್ಯೆ 80,778 ಆಗಿದೆ. ಇದೇ ಅವಧಿಯಲ್ಲಿ ಹೊಸದಾಗಿ 22 ಸಾವುಗಳು ಸಂಭವಿಸಿದ್ದು, ಸತ್ತವರ ಒಟ್ಟು ಸಂಖ್ಯೆ 3,158 ಆಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಬುಧವಾರ ತಿಳಿಸಿದೆ.

ಎಲ್ಲ ಹೊಸ ಸಾವುಗಳು ಹುಬೈ ಪ್ರಾಂತದ ರಾಜಧಾನಿ ವುಹಾನ್‌ನಲ್ಲೇ ಸಂಭವಿಸಿವೆ. ಅಲ್ಲಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮಂಗಳವಾರ ಭೇಟಿ ನೀಡಿದರು. 1.1 ಕೋಟಿ ಜನರು ವಾಸಿಸುತ್ತಿರುವ ನಗರವನ್ನು ಜನವರಿ ಉತ್ತರಾರ್ಧದಲ್ಲಿ ಬೀಗಮುದ್ರೆಯಲ್ಲಿರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News