ಪ್ರೇಕ್ಷಕರಿಲ್ಲದೆ ನಡೆಯಲಿದೆ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ!

Update: 2020-03-11 18:39 GMT

 ಹೊಸದಿಲ್ಲಿ, ಮಾ.11: ಕೊರೋನ ವೈರಸ್ ಭಾರೀ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಮಾರ್ಚ್ 24ರಿಂದ 29ರ ತನಕ ನಿಗದಿಯಾಗಿರುವ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯು ಪ್ರೇಕ್ಷಕರಿಲ್ಲದೆ ಮುಚ್ಚಿದ ಬಾಗಿಲಿನ ಒಳಗೆ ನಡೆಯುವ ಸಾಧ್ಯತೆಯಿದೆ. ಯೋನೆಕ್ಸ್-ಸನ್‌ರೈಸ್ ಇಂಡಿಯಾ ಓಪನ್-2020 ನಿಗದಿಯಂತೆ ಹೊಸದಿಲ್ಲಿಯಲ್ಲಿ ಮಾ.24ರಿಂದ 29ರ ತನಕ ನಡೆಯಲಿದೆ. ಆಟಗಾರರು ಹಾಗೂ ಅಧಿಕಾರಿಗಳ ಆರೋಗ್ಯ, ಸಾರಿಗೆ ವ್ಯವಸ್ಥೆ ಹಾಗೂ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಟೂರ್ನಮೆಂಟ್‌ನ್ನು ಪ್ರೇಕ್ಷಕರಿಲ್ಲದೆ ಮುಚ್ಚಿದ ಬಾಗಿಲಿನ ಒಳಗೆ ನಡೆಸುವ ಸಾಧ್ಯತೆಯಿದೆ ಎಂದು ಭಾರತದ ಬ್ಯಾಡ್ಮಿಂಟನ್ ಸಂಸ್ಥೆ(ಬಿಎಐ)ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಚೀನಾ, ಜಪಾನ್ ಹಾಗೂ ಇತರ ಕೊರೋನ ಪೀಡಿತ ರಾಷ್ಟ್ರಗಳ ಅಗ್ರಮಾನ್ಯ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಲಿದ್ದಾರೆ. ಚೀನಾ ಆಟಗಾರರ ಆರೋಗ್ಯ ಸ್ಥಿತಿಗತಿಯ ಕುರಿತು ಬಿಎಐ ಬಳಿ ಕೇಂದ್ರ ಸರಕಾರ ವಿಚಾರಿಸಿದೆ. 2020ರ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಅವಧಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಎಲ್ಲ ಅಗ್ರಮಾನ್ಯ ಆಟಗಾರರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News