×
Ad

ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಶಿವಪಾಲ್ ಸಿಂಗ್

Update: 2020-03-12 00:11 IST

ಹೊಸದಿಲ್ಲಿ, ಮಾ.11: ಶಿವಪಾಲ್ ಸಿಂಗ್ ಅವರು ನೀರಜ್ ಚೋಪ್ರಾ ಬಳಿಕ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡ ಭಾರತದ ಎರಡನೇ ಜಾವೆಲಿನ್ ಎಸೆತಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಪೋಚೆಫ್‌ಸ್ಟ್ರೂಮ್‌ನಲ್ಲಿ ಮಂಗಳವಾರ ನಡೆದ ಎಎನ್‌ಸಿಡಬ್ಲು ಕ್ರೀಡಾಕೂಟದಲ್ಲಿ ತನ್ನ ಐದನೇ ಪ್ರಯತ್ನದಲ್ಲಿ 85.47 ಮೀ.(85 ಮೀ. ಅರ್ಹತಾ ಮಾರ್ಕ್) ದೂರಕ್ಕೆ ಜಾವೆಲಿನ್ ಎಸೆದ 24ರ ಹರೆಯದ ಶಿವಪಾಲ್ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿಕೊಂಡರು. ಫಿನ್‌ಲ್ಯಾಂಡ್‌ನ ಟೋನಿ ತನ್ನ ಎರಡನೇ ಪ್ರಯತ್ನದಲ್ಲಿ 80.14 ಮೀ.ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಎರಡನೇ ಶ್ರೇಷ್ಠ ಪ್ರದರ್ಶನ ನೀಡಿದರು. ವರ್ಷದ ಮೊದಲ ಸ್ಪರ್ಧೆಯಲ್ಲಿ ಭಾಗವಹಿಸಿದ ಅನು ರಾಣಿ 61.15 ಮೀ.ದೂರಕ್ಕೆ ಜಾವೆಲಿನ್ ಎಸೆದು ಸಾಧಾರಣ ಪ್ರದರ್ಶನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News