ಎನ್‌ಪಿಆರ್ ವಿರುದ್ಧ ಮಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ

Update: 2020-03-12 14:28 GMT

ಮಂಗಳೂರು, ಮಾ.12: ಸರಕಾರವು ಜಾರಿಗೆ ತರಲಿರುವ ಎನ್‌ಪಿಆರ್ ಕೈಬಿಡುವಂತೆ ಒತ್ತಾಯಿಸಿ ನಾವು ಭಾರತೀಯರು (ವಿ ದಿ ಪೀಪಲ್ ಆಫ್ ಇಂಡಿಯಾ) ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಉಪವಾಸ ಧರಣಿ ನಡೆಯಿತು.

ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ನಡೆದ ದಂಡಿ ಸತ್ಯಾಗ್ರಹದ 90 ವರ್ಷಾಚರಣೆಯ ದಿನವಾದ ಇಂದು ನಗರದ ಮಿನಿ ವಿಧಾನ ಸೌಧದ ಮುಂಭಾಗ (ಕ್ಲಾಕ್ ಟವರ್ ಬಳಿ) ಧರಣಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಸತ್ಯಾಗ್ರಹದಲ್ಲಿ ಮಾತನಾಡಿದ ಶಾಂತಿ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಕುಂಞಿ, ಮಹಾತ್ಮ ಗಾಂಧೀಜಿಯಿಂದಲೇ ಸತ್ಯಾಗ್ರಹಕ್ಕೆ ಹೆಚ್ಚು ಪ್ರಮುಖ್ಯತೆ ಬಂದಿದೆ. ಸತ್ಯಾಗ್ರಹದಿಂದಲೇ ಗಾಂಧೀಜಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಕೇಂದ್ರ ಸರಕಾರದ ಎನ್‌ಪಿಆರ್, ಸಿಎಎ ಕಾಯ್ದೆಗಳನ್ನು ನಿರಾಕರಿಸಲು ಸತ್ಯಾಗ್ರಹ ಫಲಪ್ರದವಾಗಲಿದೆ ಎಂದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ದೇಶದಲ್ಲಿ ಧರ್ಮಗಳ ನಡುವೆ ವಿಭಜನೆ ಕಾರ್ಯ ನಡೆಯುತ್ತಿದೆ. ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆರ್ಥಿಕ ಕುಸಿತದಿಂದಾಗಿ ದೇಶವೇ ಕಂಗೆಟ್ಟು ಹೋಗಿದೆ. ಕೈಗಾರಿಕೆಗಳು, ಕೃಷಿ ಕ್ಷೇತ್ರಗಳು ಅತ್ಯಂತ ಅತಂತ್ರ ಸ್ಥಿತಿಯಲ್ಲಿವೆ. ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಹೇಳಿದರು.

ಮಾಜಿ ಮೇಯರ್ ಅಶ್ರಫ್ ಕೆ., ನಝೀರ್ ಉಳ್ಳಾಲ, ರಫೀವುದ್ದೀನ್ ಕುದ್ರೋಳಿ, ವಿದ್ಯಾ ದಿನಕರ್, ಎನ್. ನಂದಗೋಪಾಲ್, ಅಮೀರ್ ತುಂಬೆ, ಎ.ಕೆ. ಕುಕ್ಕುಲ, ಶೇಖರ್ ಲೈಲ, ಅಡ್ವೋಕೇಟ್ ಶರೀಫ್, ಕೆ.ಎಂ.ಶರೀಫ್, ರಫೀಕ್ ದಾರಿಮಿ, ಎಂ.ಜಿ. ಹೆಗ್ಡೆ, ಯು.ಎಚ್.ಖಾಲಿದ್, ಮಾಜಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್‌ಗಳಾದ ಅಬ್ದುಲ್ ಲತೀಫ್, ಅಬ್ದುಲ್ ರವೂಫ್ ಹಾಗೂ ಸಿಐಟಿಯು ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಪತ್ರಕರ್ತ ಹಾಗೂ ಸಾಹಿತಿ ಎ.ಕೆ. ಕುಕ್ಕುಲ, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಎಸ್‌ಡಿಪಿಐನ ಅಥಾವುಲ್ಲಾ ಜೋಕಟ್ಟೆ, ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಎನ್.ನಂದಗೋಪಾಲ್, ನಝೀರ್ ಉಳ್ಳಾಲ, ಅಮೀರ್ ತುಂಬೆ, ಶೇಖರ್ ಲೈಲ, ಅಡ್ವೋಕೇಟ್ ಶರೀಫ್, ಕೆ.ಎಂ. ಶರೀಫ್, ರಫೀಕ್ ದಾರಿಮಿ, ಎಂ.ಜಿ. ಹೆಗ್ಡೆ, ಯು.ಎಚ್. ಖಾಲೀದ್ ಉಜಿರೆ, ರಿಯಾಝ್ ಪರಂಗಿಪೇಟೆ, ಇಕ್ಬಾಲ್ ಬೆಳ್ಳಾರೆ, ಶ್ರೀಕಾಂತ್ ಸಾಲ್ಯಾನ್, ತಫ್‌ಲೀಲ್ ಎಫ್‌ಎಂ, ಜಲೀಲ್ ಕೃಷ್ಣಾಪುರ, ಅಕ್ಬರ್ ಬೆಳ್ತಂಗಡಿ, ಮುಝೈರ್ ಕುದ್ರೋಳಿ, ಕಾರ್ಪೊರೇಟರ್ ಗಳಾದ ಮುನೀರ್ ಬೆಂಗ್ರೆ, ಸಂಶುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News