ಸೋಲಿನಿಂದ ಕಲಿತ ಅನುಭವದ ಪಾಠದಿಂದ ಯಶಸ್ಸು : ಡಾ. ಕೆ.ಆರ್. ಜೋಶಿ
ಕಾರ್ಕಳ : 'ಸಾಧನೆ ಇಲ್ಲದ ಬದುಕಿನಲ್ಲಿ ರುಚಿಯಿಲ್ಲ. ಎಲ್ಲ ಸವಾಲುಗಳನ್ನು ಮೆಟ್ಟಿ ಯಶಸ್ಸಿನತ್ತ ಧಾವಿಸುವ ಪ್ರಯತ್ನ ವಿದ್ಯಾರ್ಥಿಗಳದ್ದಾಗಬೇಕು. ಪ್ರತಿಯೊಂದು ಪ್ರಯತ್ನದಲ್ಲಿಯೂ ಆರಂಭದಲ್ಲಿ ಸಮಸ್ಯೆ, ಸೋಲು, ಸಂಕಟಗಳು ಇರುವುದು ಸಹಜ. ಸೋಲಿನಿಂದಲೇ ಗೆಲುವಿನ ಚಿಗುರು ಟಿಸಿಲೊಡೆಯುತ್ತದೆ. ಸೋಲಿನಿಂದ ಕಲಿತ ಅನುಭವದ ಪಾಠ ಮುಂದೆ ಯಶಸ್ಸಿನ ಹಾದಿಯಲ್ಲಿ ನಡೆಸುತ್ತದೆ' ಎಂದು ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕಾರ್ಕಳ ಘಟಕದ ಅಧ್ಯಕ್ಷ ಡಾ. ಕೆ.ಆರ್. ಜೋಶಿ ಹೇಳಿದರು.
ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿ, ಎನ್‍ಐಟಿಕೆ (ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್)ಯಿಂದ ಪಿಎಚ್‍ಡಿ ಪದವಿ ಪಡೆದ ಕೀರ್ತಿ ಶೆಟ್ಟಿ ಅವರಿಗೆ ಶಾಲಾ ವತಿಯಿಂದ ಕಾರ್ಕಳ ಹೊಸಸಂಜೆ ಬಳಗದ ಸಹಕಾರದೊಂದಿಗೆ ಆಯೋಜಿಸಿದ ಸನ್ಮಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ವಿಜಯರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಹೊಸಸಂಜೆ ಬಳಗದ ಅಧ್ಯಕ್ಷ ಆರ್. ದೇವರಾಯ ಪ್ರಭು, ಮರ್ಣೆ ಗ್ರಾಮ ಪಂಚಾಯತ್ ಸದಸ್ಯೆ, ಮಹಿಳಾ ಉದ್ಯಮಿ ವಿದ್ಯಾ ಪೈ ಅಜೆಕಾರು, ಸ್ಥಳೀಯ ಪುರಸಭಾ ಸದಸ್ಯ ಪ್ರದೀಪ ರಾಣೆ, ಹಿರಿಯ ಪತ್ರಕರ್ತ ಕೆ. ಪದ್ಮಾಕರ ಭಟ್, ಉದ್ಯಮಿಗಳಾದ ಕೆ. ತ್ರಿವಿಕ್ರಮ ಕಿಣಿ ಕುಕ್ಕುಂದೂರು ಉಪಸ್ಥಿತರಿದ್ದು ಶುಭಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕಿ ಹರ್ಷಿಣಿ ಕೆ. ಸ್ವಾಗತಿಸಿದರು. ಶಿಕ್ಷಕಿ ವೀಣಾ ಕಾರ್ಯಕ್ರಮ ನಿರ್ವಹಿಸಿದರು.