×
Ad

​ಮಂಗಳೂರು: ‘ಆಪಿಸ್ ಕ್ಲಿನಿಕ್ಸ್’ ಶುಭಾರಂಭ

Update: 2020-03-12 20:34 IST

ಮಂಗಳೂರು, ಮಾ.12: ವಿಶ್ವ ಕಿಡ್ನಿ ದಿನದ ಪ್ರಯುಕ್ತ ವಿನೂತನ ಸೌಲಭ್ಯಗಳನ್ನು ಒಳಗೊಂಡ ‘ಆಪಿಸ್ ಕ್ಲಿನಿಕ್ಸ್’ ಮಂಗಳೂರು ನಗರದ ಫಳ್ನೀರ್‌ನ ಹೆಲ್ತ್ ಸೆಂಟರ್ ಕಟ್ಟಡದಲ್ಲಿ ಗುರುವಾರ ಶುಭಾರಂಭಗೊಂಡಿತು.

ಕಿಡ್ನಿ ವೈಫಲ್ಯ ಮತ್ತು ಕಿಡ್ನಿ ರೋಗಗಳನ್ನು ತಡೆಯುವ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಆಪಿಸ್ ಕಿಡ್ನಿ ಫೌಂಡೇಶನ್‌ನಿಂದ 'ಆಪಿಸ್ ಕ್ಲಿನಿಕ್ಸ್' ಲೋಕಾರ್ಪಣೆಗೊಂಡಿದ್ದು, ಮನಪಾ ಮೇಯರ್ ದಿವಾಕರ್ ಪಾಂಡೇಶ್ವರ ಉದ್ಘಾಟಿಸಿದರು.

ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಆಪಿಸ್ ಕ್ಲಿನಿಕ್, ಯುನಿಟಿ ಕೇರ್ ಆ್ಯಂಡ್ ಹೆಲ್ತ್ ಸರ್ವಿಸೆಸ್‌ನ ಚೇರ್‌ಮನ್ ಡಾ. ಸಿ.ಪಿ. ಹಬೀಬ್ ರಹ್ಮಾನ್ ಆಪಿಸ್ ರೋಗ ತಪಾಸಣಾ ಕೇಂದ್ರ, ಸೀನಿಯರ್ ಫಿಝಿಶಿಯನ್ ಡಾ. ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ ಆಪಿಸ್ ಔಷಧ ವಿಭಾಗ, ಡಾ. ಅಬ್ದುಲ್ ಮಜೀದ್ ಆಪಿಸ್ ಕಿರು ಶಸ್ತ್ರಚಿಕಿತ್ಸಾ ವಿಭಾಗ ಹಾಗೂ ಡಾ.ನವೀಶಾ ಲತೀಫ್ ಆಪಿಸ್ ಕನ್ನಡಕ ಕೇಂದ್ರವನ್ನು ಉದ್ಘಾಟಿಸಿದರು.

ಆಪಿಸ್ ಕ್ಲಿನಿಕ್ಸ್‌ನಲ್ಲಿ ಮಹಿಳೆ ಮತ್ತು ಮಕ್ಕಳ ವಿಭಾಗ ಹಾಗೂ ಚರ್ಮ, ಹೃದಯ, ಆನ್ಕಾಲಜಿ ಮತ್ತು ಪ್ರೊಕ್ಟಾಲಜಿ ಚಿಕಿತ್ಸಾ ವಿಭಾಗಗಳಿದ್ದು ನುರಿತ ವೈದ್ಯರ ಸೇವೆಗಳು ಲಭ್ಯವಿರುತ್ತವೆ. ಅತ್ಯಾಧುನಿಕ ವೇಗ ಹಾಗೂ ಸುರಕ್ಷಿತವಾದ ಲೇಝರ್, ಕಿಡ್ನಿ ಸ್ಟೋನ್ ಮತ್ತು ಪ್ರೊಸ್ಟೆಟ್ ಸಂಬಂಧಿತ ರೋಗಗಳಿಗಾಗಿ ಥುಲಿಯಮ್ ಫೈಬರ್ ಲೇಸರ್ ಚಿಕಿತ್ಸೆ ಸೌಲಭ್ಯವಿದೆ.

ಲೇಸರ್ ಕಿಡ್ನಿ ಸ್ಟೋನ್ ಹಾಗೂ ಪ್ರೊಸ್ಟೆಟ್ ಸರ್ಜರಿಯು ಕೇವಲ 30,000 ರೂ.ನಲ್ಲಿ ನಡೆಸಿಕೊಡಲಾಗುವುದು. ಆಪಿಸ್ ಇನ್‌ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸಾಯನ್ಸ್ ಶಿಕ್ಷಣ ಕೇಂದ್ರವನ್ನೂ ಆರಂಭಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ ಎಂದು ಈ ಸಂದರ್ಭ ತಿಳಿಸಲಾಯಿತು.

ಆಪಿಸ್ ಹೆಲ್ತ್‌ ಕೇರ್‌ನ ವ್ಯವಸ್ಥಾಪಕ ನಿರ್ದೇಶಕ ಅಬು ಯಝರ್ ಕೆ.ಪಿ., ಯುರಾಲಜಿ ಸೀನಿಯರ್ ಕನ್ಸಲ್ಟಂಟ್ ಡಾ. ಮುಹಮ್ಮದ್ ಸಲೀಂ, ಡಾ.ಎ.ಎನ್. ಸುಧೀಂದ್ರ, ಡಾ. ಆಯಿಶಾ ಸಫೂರಾಹ್, ಡಾ. ಹರೀಶ್ ಇ., ಡಾ. ನಾಗಾರ್ಜುನ್ ರಾವ್ ಎಚ್.ಟಿ., ಡಾ. ಆಶ್ಮಿಯಾ ಅಬ್ದುಲ್ ರಝಾಕ್, ಡಾ. ಅಬ್ದುಲ್ ಬಾಶಿತ್, ಡಾ. ಮನೀಶ್ ರೈ ಕೆ., ರಮೀಝಾ ನಾಸಿರ್,  ನಾಸಿರ್ ಯಾದ್ಗಾರ್, ಹಂಝ, ರಶೀದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News