×
Ad

ಉಡುಪಿ: ಮಾ.15ಕ್ಕೆ ವಿಶ್ವ ಗ್ರಾಹಕರ ದಿನಾಚರಣೆ

Update: 2020-03-12 21:08 IST

ಉಡುಪಿ, ಮಾ.12: ಬಳಕೆದಾರರ ವೇದಿಕೆ ಉಡುಪಿ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಉಡುಪಿ ಜಿಲ್ಲಾಡಳಿತ ಮತ್ತು ಇತರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗ್ರಾಹಕ ದಿನಾಚರಣೆ -2020 ಉಡುಪಿಯ ವೈಕುಂಠ ಬಾಳಿಗ ಕಾನೂನು ವಿದ್ಯಾಲಯ ಸಭಾಂಗಣದಲ್ಲಿ ಮಾ.15ರ ರವಿವಾರ ಬೆಳಗ್ಗೆ 9:30ರಿಂದ ಅಪರಾಹ್ನ 1:30ರ ತನಕ ನಡೆಯಲಿದೆ.

ಸುಸ್ಥಿರ ಗ್ರಾಹಕ ಮತ್ತು ಗ್ರಾಹಕ ರಕ್ಷಣಾ ಕಾನೂನು 2019ರ ಕುರಿತು ಇಲ್ಲಿ ವಿಸ್ತೃತ ಚಿಂತನೆ ನಡೆಸಲಾಗುವುದು. ಆಸಕ್ತರು ಇದರಲ್ಲಿ ಭಾಗವಹಿಸು ವಂತೆ ಬಳಕೆದಾರರ ವೇದಿಕೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News