ಅನುಮತಿ ಹಿಂದೆಗೆದುಕೊಳ್ಳಲು ಉಡುಪಿ ಜಿಲ್ಲಾಧಿಕಾರಿಗೆ ಮನವಿ
ಮಣಿಪಾಲ, ಮಾ.12: ಜನಜೀವನದ ಬದುಕಿಗೆ ಮಾರಕವಾಗುವ ಮೀನು ಉತ್ಪನ್ನಗಳ ಕೈಗಾರಿಕಾ ಘಟಕ ಸ್ಥಾಪನೆಗೆ ಅನುಕೂಲವಾಗುವಂತೆ ಕೈಗಾರಿಕಾ ವಲಯ ಭೂ ಪರಿವರ್ತನೆಗೆ, ಉಡುಪಿ ಜಿಪಂ ಅಧ್ಯಕ್ಷರು ನೀಡಿದ ಆದೇಶವನ್ನು ಹಿಂಪಡೆದುಕೊಳ್ಳುವಂತೆ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರಗಿದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಉದ್ಯಾವರ ಗ್ರಾಪಂ ಉಪಾಧ್ಯಕ್ಷ ರಿಯಾಝ್ ಪಳ್ಳಿ, ಸದಸ್ಯರಾದ ಲಾರೆನ್ಸ್ ಡೇಸಾ, ದಿವಾಕರ್ ಬೊಳ್ಜೆ, ಪ್ರತಿಭಟನಾ ಸಭೆಯ ಸಂಚಾಲಕ ಆನಂದ್ ಕೊರಂಗ್ರಪಾಡಿ, ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಾವತಿ ಎಸ್. ಭಂಡಾರಿ, ಕಾರ್ಯಕರ್ತರಾದ ಮೇರಿ ಡಿಸೋಜಾ, ಶೇಖರ್ ಕೆ. ಕೋಟ್ಯಾನ್, ಕೀರ್ತಿ ಶೆಟ್ಟಿ ಅಂಬಲಪಾಡಿ, ಗಣೇಶ್ ಸರಳೇಬೆಟ್ಟು, ಬಿ.ಕೆ.ರಾಜ್ ಮುಂತಾದವರು ಉಪಸ್ಥಿತರಿದ್ದರು.