ಗಾಂಜಾ ಸೇವನೆ: ಇಬ್ಬರು ವಶಕ್ಕೆ
Update: 2020-03-12 22:03 IST
ಉಡುಪಿ, ಮಾ.12: ಆದಿಉಡುಪಿಯಲ್ಲಿರುವ ಹಳೆ ಆರ್‌ಟಿಓ ಕಛೇರಿಯ ಬಳಿ ಮಾ.11ರಂದು ಗಾಂಜಾ ಸೇವನೆ ಮಾಡುತ್ತಿದ್ದ ಕಲ್ಮಾಡಿಯ ಗಣೇಶ್ ಅಮೀನ್(31) ಎಂಬಾತನನ್ನು ಉಡುಪಿ ನಗರ ಪೊಲೀಸರು ವಶಕ್ಕೆ ಪಡೆದು ಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ: ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಮಾ.12ರಂದು ಬೆಳಗ್ಗೆ ಗಾಂಜಾ ಸೇವನೆ ಮಾಡುತ್ತಿದ್ದ ಮೂಡನಿಡಂಬೂರು ಗ್ರಾಮದ ಪಂದು ಬೆಟ್ಟು ನಿವಾಸಿ ನಬೀಲ್(21) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.