ವಿಟ್ಲ : ಫಿಖ್ಹ್ ಸೆಮಿನಾರ್, ಶಂಸುಲ್ ಉಲಮಾ ಆಂಡ್ ನೇರ್ಚೆ

Update: 2020-03-12 16:59 GMT

ವಿಟ್ಲ : ದಾರಿಮೀಸ್ ದ ಕ ಜಿಲ್ಲಾ ಸಮಿತಿ ಇದರ 18ನೇ ವಾರ್ಷಿಕೋತ್ಸವದ ಪ್ರಯುಕ್ತ  ಫಿಖ್ಹ್ ಸೆಮಿನಾರ್ ಮತ್ತು ಶಂಸುಲ್ ಉಲಮಾ ಆಂಡ್ ನೇರ್ಚೆಯು ಮಾಣಿ ಕೊಡಾಜೆಯ ತರ್ಬಿಯತುಲ್ ಇಸ್ಲಾಂ ಮದ್ರಸದ ವಠಾರದಲ್ಲಿ ನಡೆಯಿತು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರಾದ ಶೈಖುನಾ ಎ.ವಿ.ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು  ಜಿಲ್ಲಾ ಜಂಇಯ್ಯತುಲ್ ಉಲಮಾದ ಕಾರ್ಯಾಧ್ಯಕ್ಷ ಇಬ್ರಾಹೀಮ್ ಬಾಖವಿ ಕೆ.ಸಿ.ರೋಡ್ ಉದ್ಘಾಟಿಸಿದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಕೆ.ಕೆ.ಮಾಹಿನ್ ಉಸ್ತಾದ್ ತೊಟ್ಟಿ , ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ   ಆಶಿರ್ವಚನಗೈದರು. ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್, ದಾರಿಮೀಸ್ ರಾಜ್ಯಾಧ್ಯಕ್ಷ ಎಸ್.ಬಿ.ದಾರಿಮಿ, ದಾರಿಮೀಸ್ ರಾಜ್ಯ ಕಾರ್ಯದರ್ಶಿ ಯು.ಕೆ.ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿದರು.  ಶುಹೈಬ್ ದಾರಿಮಿ ಹೈತಮಿ ಕೇರಳ ಫಿಖ್ಹ್ ಸೆಮಿನಾರ್ ನಡೆಸಿಕೊಟ್ಟರು.

ಪಿ.ಕೆ.ಆದಂ ದಾರಿಮಿ ಕೊಡಾಜೆ, ಹುಸೈನ್ ದಾರಿಮಿ ರೆಂಜಲಾಡಿ, ಮಾಹಿನ್ ದಾರಿಮಿ ಪಾತೂರು, ಅಬ್ದುಲ್ ಹಮೀದ್ ದಾರಿಮಿ ಸಂಪ್ಯ,  ಇಬ್ರಾಹಿಂ ರಾಜ್ ಕಮಲ್, ರಫೀಕ್ ಹಾಜಿ ಸುಲ್ತಾನ್,  ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ದಾರಿಮೀಸ್ ಅಧ್ಯಕ್ಷ ಕೆ.ಬಿ.ದಾರಿಮಿ ಕೊಡುಂಗಾಯಿ ಸ್ವಾಗತಿಸಿ, ಜಿಲ್ಲಾ ದಾರಿಮೀಸ್ ಕೋಶಾಧಿಕಾರಿ ಅಬ್ದುಲ್ ಕರೀಂ ದಾರಿಮಿ ಸಂಪ್ಯ  ಖಿರಾಅತ್ ಪಠಿಸಿದರು. ಹನೀಫ್ ದಾರಿಮಿ ನೆಕ್ಕಿಲಾಡಿ ವಂದಿಸಿದರು. ಜಿಲ್ಲಾ ದಾರಿಮೀಸ್ ಕಾರ್ಯದರ್ಶಿ ಕೆ.ವಿ.ಮಜೀದ್ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News