‘ಕಾಂಚನಾ ಹೋಂಡಾ’ ಸಂಸ್ಥೆ : ಬೃಹತ್ ಎಕ್ಸ್‌ಚೇಂಜ್, ಸಾಲಮೇಳ ಆರಂಭ

Update: 2020-03-12 17:05 GMT

ಮಂಗಳೂರು, ಮಾ.12: ನಗರದ ಪ್ರಸಿದ್ಧ ‘ಕಾಂಚನಾ ಮೋಟರ್ಸ್‌’ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿರುವ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ (ಸಿಪಿಎಲ್-2020) ಪಂದ್ಯಾಟದ ಸಹಪ್ರಯೋಜಕರಾದ ‘ಕಾಂಚನಾ ಹೋಂಡಾ’ದ ವತಿಯಿಂದ ಬೃಹತ್ ಎಕ್ಸ್‌ಚೇಂಜ್ ಮತ್ತು ಸಾಲಮೇಳವು ಗುರುವಾರ ಆರಂಭಗೊಂಡಿದ್ದು, ಮಾ.16ರವರೆಗೆ ನಡೆಯಲಿದೆ.

ಬಿಎಸ್ 6 ಮಾದರಿಯ ‘ಹೋಂಡಾ ಆ್ಯಕ್ಟಿವಾ 6ಜಿ’ಯು 6,666 ಡೌನ್‌ಪೇಮಂಟ್‌ನಲ್ಲಿ ಸುಲಭ ಕಂತುಗಳ ಕಡಿಮೆ ಬಡ್ಡಿದರದಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಸಂದರ್ಭ ಸಿಗುವ ಕೂಪನನ್ನ್ ಸ್ಕ್ರಾಚ್ ಮಾಡಿ ವಿಜೇತರಿಗೆ 2,500 ರೂ.ವರೆಗಿನ ನಗದು ಮರಳಿ ಪಡೆಯಬಹುದು. ‘ಹೋಂಡಾ ಆ್ಯಕ್ಟಿವಾ 6ಜಿ’ ಖರೀದಿಸಿದರೆ ಹೋಂಡಾ ಹೆಲ್ಮೆಟ್ ಮತ್ತು ಫುಲ್‌ಟ್ಯಾಂಕ್ ಪೆಟ್ರೋಲ್ ಉಚಿತವಾಗಿ ಸಿಗಲಿದೆ.

ಬಿಎಸ್ 6 ಹೊಸ ಮಾದರಿಯ ಹೋಂಡಾ ಡಿಯೋ, ಹೋಂಡಾ ಶೈನ್, ಹೋಂಡಾ ಎಸ್‌ಪಿ 125 ದ್ವಿಚಕ್ರ ವಾಹನವೂ ಲಭ್ಯವಿದೆ.

ಅದಲ್ಲದೆ ಶೂನ್ಯ ಬಡ್ಡಿದರದ ಯೋಜನೆಯ ಅವಕಾಶವನ್ನೂ ಕಲ್ಪಿಸಲಾಗಿದ್ದು, ಹಳೆಯ ವಾಹನಗಳ ಎಕ್ಸ್‌ಚೇಂಜ್ ಮಾಡುವ ಅವಕಾಶವೂ ಇದೆ. ಈ ಹಳೆಯ ವಾಹನಗಳಿಗೆ ಮಾರುಕಟ್ಟೆ ದರಕ್ಕಿಂತ ಉತ್ತಮ ದರದಲ್ಲಿ ವಿನಿಮಯ ಮಾಡಲಾಗುವುದು. ಗುರುವಾರ ಆರಂಭಗೊಂಡ ಎಕ್ಸ್‌ಚೇಂಜ್ ಮೇಳದಲ್ಲಿ ಸುಮಾರು 50ಕ್ಕಿಂತಲೂ ಅಧಿಕ ವಾಹನಗಳು ವಿನಿಮಯಗೊಂಡಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News