ಅಲ್ಪಸಂಖ್ಯಾತರ ಯೋಜನೆ ಮರುಜಾರಿಗೆ ಎಂಜೆಎಫ್ ಮನವಿ
Update: 2020-03-12 22:38 IST
ಮಂಗಳೂರು, ಮಾ.12: ರಾಜ್ಯದ ಅಲ್ಪಸಂಖ್ಯಾತರಿಗೆ ಮೀಸಲಾಗಿದ್ದ ಸುಮಾರು 744 ಕೋ.ರೂ. ಅನುದಾನ ಕಡಿತ ಮತ್ತು 13 ವಿವಿಧ ಯೋಜನೆಗಳನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಹಾಗೂ ಅದನ್ನು ಮರು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ‘ಮುಸ್ಲಿಂ ಜಸ್ಟೀಸ್ ಫಾರಂ ಕರ್ನಾಟಕ’ದ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಎಂಜೆಎಫ್ ಸ್ಥಾಪಕ ಮತ್ತು ಗೌರವಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಅಧ್ಯಕ್ಷ ಡಾ.ಅಮೀರ್ ತುಂಬೆ, ಉಪಾಧ್ಯಕ್ಷ ಇರ್ಶಾದ್ ಯುಟಿ ಸಲೀಮ್ ಮಿತ್ತೂರ್ ಮತ್ತು ಮುಸ್ತಫಾ ಕೆಂಪಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ವಹಾಬ್ ಕುದ್ರೋಳಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಇಕ್ಬಾಲ್ ಸಾಮಣಿಗೆ, ಇದ್ದಿನ್ ಕುಂಞಿ, ಇಮ್ರಾನ್ ಕುದ್ರೋಳಿ ಉಪಸ್ಥಿತರಿದ್ದರು.