×
Ad

ಕೊರೋನ ವೈರಸ್ ಎಫೆಕ್ಟ್: ಈ ವರ್ಷದ ಐಪಿಎಲ್ ಮುಂದೂಡಿಕೆ

Update: 2020-03-13 14:56 IST

ಮುಂಬೈ, ಮಾ.13: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮಾರ್ಚ್ 29ರಂದು ಆರಂಭವಾಗಬೇಕಾಗಿದ್ದ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಮುಂದೂಡಲು ನಿರ್ಧರಿಸಲಾಗಿದೆ. ಈ ವರ್ಷದ ಐಪಿಎಲ್ ಟೂರ್ನಮೆಂಟ್ ಎಪ್ರಿಲ್ ಮಧ್ಯಭಾಗದಲ್ಲಿ(ಎ.15)ಆರಂಭವಾಗುವ ಸಾಧ್ಯತೆಯಿದೆ. ಐಪಿಎಲ್ ಮುಂದೂಡಿಕೆಯ ಕುರಿತು ಅಧಿಕೃತ ಘೋಷಣೆ ಸಂಜೆ ವೇಳೆಗೆ ಪ್ರಕಟವಾಗಲಿದೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ಹಾಗೂ ಕಾರ್ಯದರ್ಶಿ ಜಯ ಶಾ ನೇತೃತ್ವದಲ್ಲಿ ಬಿಸಿಸಿಐ ಪದಾಧಿಕಾರಿಗಳ ಸಭೆ ಮುಂಬೈನ ಮುಖ್ಯ ಕಚೇರಿಯಲ್ಲಿ ಶುಕ್ರವಾರ ನಡೆದಿದ್ದು, ಈ ಸಭೆಯಲ್ಲಿ ಐಪಿಎಲ್ ಮುಂದೂಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಐಪಿಎಲ್ ಆಡಳಿತ ಮಂಡಳಿಯ ಸಭೆ ಶನಿವಾರ ಮುಂಬೈನಲ್ಲಿ ನಿಗದಿಯಾಗಿದೆ. ಇದಕ್ಕೂ ಮೊದಲು ಬಿಸಿಸಿಐನ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳು ಲೀಗ್‌ನ ಎಲ್ಲ ಫ್ರಾಂಚೈಸಿಗಳನ್ನು ಭೇಟಿಯಾಗುವ ನಿರೀಕ್ಷೆಯಿದೆ. ಮುಂದೇನು ಮಾಡಬೇಕೆಂಬ ಕುರಿತು ಚರ್ಚಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News