×
Ad

ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕಿಲ್ಲ

Update: 2020-03-13 18:57 IST

ಉಡುಪಿ, ಮಾ.13: ಶಂಕಿತ ಕೊರೋನ ವೈರಸ್ ಸೋಂಕಿನ ಪರೀಕ್ಷೆಗಾಗಿ ನಿನ್ನೆ ಮಣಿಪಾಲದ ಕೆಎಂಸಿಯ ಪ್ರತ್ಯೇಕಿತ ವಾರ್ಡ್‌ಗೆ ದಾಖಲಾಗಿದ್ದ ಮಣಿಪಾಲ ಕೆಎಂಸಿಯ ಇಬ್ಬರು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಿಲ್ಲ ಎಂದು ಪರೀಕ್ಷೆಯಿಂದ ಗೊತ್ತಾಗಿದೆ.

ಆಂಧ್ರ ಪ್ರದೇಶ ಹಾಗೂ ಕೇರಳದ ಈ ವಿದ್ಯಾರ್ಥಿಗಳು ಅಮೆರಿಕ ಹಾಗೂ ಮಲೇಷ್ಯಾದಿಂದ ಇತ್ತೀಚೆಗೆ ಮಣಿಪಾಲಕ್ಕೆ ಹಿಂದಿರುಗಿದ್ದು, ಕೊರೋನ ವೈರಸ್‌ನ ಪ್ರಾಥಮಿಕ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಶಿವಮೊಗ್ಗಕ್ಕೆ ಕಳುಹಿಸಲಾದ ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯ ಪರೀಕ್ಷೆ ಇಂದು ಕೈಸೇರಿದ್ದು, ಅದರಲ್ಲಿ ಸೋಂಕು ಇಲ್ಲ ಎಂದು ಖಚಿತವಾಗಿದೆ ಎಂದು ಡಿಎಚ್‌ಒ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಇಂದು ದಾಖಲಾದ ಮತ್ತೊಬ್ಬ ಕೆಎಂಸಿಯ ಮತ್ತೊಬ್ಬ ವಿದ್ಯಾರ್ಥಿ ಮೂಲತ ದುಬೈಯವರಾಗಿದ್ದು, ಅವರ ಅಲ್ಲಿಂದ ಮರಳಿದ್ದರು. ಅವರ ಮಾದರಿಗಳನ್ನು ಪರೀಕ್ಷೆಗಾಗಿ ಇಂದು ಕಳುಹಿಸಲಾಗಿದ್ದು, ಫಲಿತಾಂಶ ನಾಳೆ ತಿಳಿಯುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News