ಮಾ:16-20: ತಲಪಾಡಿ ಬಿಲಾಲ್ ಮಸ್ಜಿದ್‌ನಲ್ಲಿ ಸ್ವಲಾತ್ ವಾರ್ಷಿಕ
Update: 2020-03-13 20:13 IST
ಮಂಗಳೂರು, ಮಾ.13: ತಲಪಾಡಿ ಬಿಲಾಲ್ ಜುಮಾ ಮಸ್ಜಿದ್‌ನಲ್ಲಿ ಮಾಸಿಕ ನಡೆಸಲ್ಪಡುವ ಸ್ವಲಾತಿನ 17ನೆ ವಾರ್ಷಿಕ ಕಾರ್ಯಕ್ರಮವು ಮಾ.16ರಿಂದ 20ರ ತನಕ ಧಾರ್ಮಿಕ ಪ್ರವಚನದೊಂದಿಗೆ ಜರುಗಲಿದೆ. ಯಾಕೂಬ್ ಪಿಎಂ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಖಾಝಿ ಪಿಎಂ ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಅಬ್ದುರ್ರಶೀದ್ ಝೈನಿ ಸಖಾಫಿ, ಅಬ್ದಲ್ ಹಮೀದ್ ಫೈಝಿ ಕಿಲ್ಲೂರು, ಅಬ್ದಲ್ ಲತೀಫ್ ಸಖಾಫಿ ಕಾಂತಪುರ, ಅಲ್ಹಾಜ್ ಕೆಪಿ ಹುಸೈನ್ ಸಅದಿ ಕೆಸಿ ರೋಡ್ ಪ್ರವಚನ ನೀಡಲಿದ್ದಾರೆ.
ಸ್ವಲಾತ್ ಮಜ್ಲಿಸ್‌ನ ನೇತೃತ್ವವನ್ನು ಅಸೈಯ್ಯದ್ ಶಫೀಉಲ್ಲಾಹ್ ಅಲ್ ಹೈದ್ರೋಸ್ ಪಿಎಂಎಸ್ ತಂಙಳ್ ತ್ರಿಶೂರ್ ವಹಿಸುವರು ಎಂದು ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್ ತಲಪಾಡಿ ತಿಳಿಸಿದ್ದಾರೆ.