ದೇಹದಾಡ್ಯ ಸ್ಪರ್ಧಾ ವಿಜೇತರಿಗೆ ಸನ್ಮಾನ
Update: 2020-03-14 20:13 IST
ಮಂಗಳೂರು, ಮಾ.14: ದ.ಕ. ಜಿಲ್ಲೆಯ ವಿವಿಧೆಡೆ ನಡೆದ ದೇಹದಾಡ್ಯ ಸ್ಪರ್ಧೆಯಲ್ಲಿ ವಿಜೇತರಾದ ರಿತೇಶ್ ಡಿಸೋಜ, ಶಬ್ಬೀರ್ ಉಳ್ಳಾಲ, ನವಾಝ್ ನಾಟೆಕಲ್, ನೂತನ್ ಶೆಟ್ಟಿ ಕದ್ರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಶನಿವಾರ ನಗರದಲ್ಲಿ ನಡೆಯಿತು.
ಶಾಸಕ ಯು.ಟಿ ಖಾದರ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಸರ್ ಸಾಮಣಿಗೆ ವಿಜೇತರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತ್ವಾಹಾ ಹಾಜಿ ಉಳ್ಳಾಲ, ಇಸ್ಮಾಯೀಲ್, ಅಲ್ತಾಫ್ ಉಳ್ಳಾಲ, ಝಕರಿಯಾ ಮಲಾರ್, ರಫೀಕ್ ಉಳ್ಳಾಲ, ಇಲ್ಯಾಸ್ ಉಳ್ಳಾಲ ಉಪಸ್ಥಿತರಿದ್ದರು.