ನೀರು ಪೂರೈಕೆಗೆ ತ್ರೀಡಿ ವ್ಯವಸ್ಥೆ ಆಳವಡಿಸಲು ಶಾಸಕರ ಸೂಚನೆ
Update: 2020-03-14 21:18 IST
ಉಡುಪಿ, ಮಾ.14: ಉಡುಪಿ ನಗರಸಭೆ ಮತ್ತು ಸುತ್ತಲಿನ ನಾಲ್ಕು ಗ್ರಾಮ ಪಂಚಾಯತ್‌ಗಳ ನೀರಿನ ಸಮಸ್ಯೆಯ ಕುರಿತು ಇಂದು ಉಡುಪಿ ನಗರಸಭೆ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್, ನೀರಿನ ಸಮಸ್ಯೆ ಬಗ್ಗೆ ಚರ್ಚಿಸಿ ನೀರು ಪೂರೈಕೆಗೆ ತ್ರೀಡಿ ವ್ಯವಸ್ಥೆಯನ್ನು ಅಳವಡಿಸಬೇಕು ಹಾಗೂ ನೀರು ವ್ಯಯ ಆಗದಂತೆ ಗೆಟ್ವಾಲ್ ಅಳವಡಿಸಬೇಕು. ಗೆಟ್ ವಾಲ್ಗಳ ನಿಯಂತ್ರಣವನ್ನು ನಗರಭೆ ನಿರ್ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯ ಕಾರ್ಯಪಾಲಕ ಅಭಿ ಯಂತರರು ಹಾಗೂ ಆತ್ರಾಡಿ, ಬೊಮ್ಮರಬೆಟ್ಟು, 80 ಬಡಗಬೆಟ್ಟು, ಕೋಡಿ ಬೆಟ್ಟು ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.