ಯೆಸ್ ಬ್ಯಾಂಕ್ ಬಿಕ್ಕಟ್ಟು: ಹಣ ಹಿಂಪಡೆಯುವ ನಿರ್ಬಂಧ ಶೀಘ್ರ ರದ್ದು : ಸರಕಾರ

Update: 2020-03-14 16:20 GMT

ಹೊಸದಿಲ್ಲಿ, ಮಾ.14: ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಯೆಸ್‌ಬ್ಯಾಂಕ್‌ನಿಂದ ಗ್ರಾಹಕರು 50,000 ರೂ. ಮಾತ್ರ ಹಿಂಪಡೆಯಬಹುದು ಎಂಬ ನಿರ್ಬಂಧವನ್ನು ಮೂರು ದಿನದೊಳಗೆ ರದ್ದುಗೊಳಿಸುವುದಾಗಿ ಸರಕಾರ ಹೇಳಿದೆ.

ಯೆಸ್ ಬ್ಯಾಂಕ್‌ನ ಪುನರ್‌ರಚನೆಗೆ ರಿಸರ್ವ್ ಬ್ಯಾಂಕ್ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಗೆ ಚಾಲನೆ ದೊರೆತ ಬಳಿಕದ ಮೂರು ಕೆಲಸದ ದಿನದೊಳಗೆ ಹಣ ಹಿಂಪಡೆಯಲು ಇರುವ ನಿರ್ಬಂಧ ರದ್ದಾಗಲಿದೆ ಎಂದು ಸರಕಾರ ತಿಳಿಸಿದೆ.

 ಯೆಸ್‌ಬ್ಯಾಂಕ್‌ನ ಪುನರ್‌ರಚನೆಯ ಯೋಜನೆಗೆ ಕೇಂದ್ರ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. ಈ ಮಧ್ಯೆ, ಪುನರ್‌ರಚನೆ ಯೋಜನೆಯ ಅಂಗವಾಗಿ ಯೆಸ್‌ಬ್ಯಾಂಕ್‌ ನಲ್ಲಿ 1,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಐಸಿಐಸಿಐ ಬ್ಯಾಂಕ್ ಘೋಷಿಸಿದೆ. ಇದರೊಂದಿಗೆ ಯೆಸ್‌ಬ್ಯಾಂಕ್‌ನ 5% ಶೇರುಗಳನ್ನು ಐಸಿಐಸಿಐ ಬ್ಯಾಂಕ್ ಹೊಂದಲಿದೆ. ಜೊತೆಗೆ, ಆ್ಯಕ್ಸಿಸ್ ಬ್ಯಾಂಕ್ 600 ಕೋಟಿ ರೂ., ಎಚ್‌ಡಿಎಫ್‌ಸಿ 1,000 ಕೋಟಿ ರೂ. ಹೂಡಿಕೆ ಮಾಡಲಿದೆ. ಯೆಸ್‌ಬ್ಯಾಂಕ್‌ನ 49% ಶೇರುಗಳನ್ನು ಎಸ್‌ಬಿಐ ಖರೀದಿಸಲಿದೆ ಎಂದು ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News