ಹೊಳೆಗೆ ಹಾರಿ ಆತ್ಮಹತ್ಯೆ
Update: 2020-03-14 21:52 IST
ಕುಂದಾಪುರ, ಮಾ.14: ಕಿಡ್ನಿ ವೈಪಲ್ಯ ಹಾಗೂ ಕಾಲು ನೋವಿನ ಸಮಸ್ಯೆ ಯಿಂದ ಬಳಲುತ್ತಿದ್ದ ಕುಂದಾಪುರ ಬಹದ್ದೂರ್ ಷಾ ರಸ್ತೆಯ ನಿವಾಸಿ ಸುಂದರ ಖಾರ್ವಿ(52) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.13ರಂದು ರಾತ್ರಿ ವೇಳೆ ಕುಂದಾಪುರ ಮೇಲ್ಕೇರಿಯ ಶ್ರೀನಾಗಜಟ್ಟೆಗೇಶ್ವರ ದೇವಸ್ಥಾನದ ಬಳಿಯ ಪಂಚಗಂಗಾವಳಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.