ಮಾವೋವಾದಿಗಳಿಂದ ಐಇಡಿ ಸ್ಫೋಟ: ಚತ್ತೀಸ್‌ಗಢದಲ್ಲಿ ಇಬ್ಬರು ಯೋಧರು ಹುತಾತ್ಮ

Update: 2020-03-14 16:52 GMT

ರಾಯ್‌ಪುರ, ಮಾ. 14: ಚತ್ತೀಸ್‌ಗಢದ ಬೋಡಿಲಿ ಸಮೀಪ ಮಾವೋವಾದಿಗಳು ಐಇಡಿ ಸ್ಫೋಟಿಸಿದ ಪರಿಣಾಮ ಚತ್ತೀಸ್‌ಗಢ ಶಶಸ್ತ್ರ ಪಡೆ (ಸಿಎಎಫ್)ಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಇನೊಬ್ಬರು ಗಾಯಗೊಂಡಿದ್ದಾರೆ.

ಧೌಡಾಲಿ-ಬರ್ಸೂರ್ ದಾರಿಯಲ್ಲಿ ಮಲೆವಾಹಿ ಹಾಗೂ ಬೋಡಿಲಿ ನಡುವೆ ರಸ್ತೆ ನಿರ್ಮಾಣ ಕಾಮಗಾರಿಗೆ ರಕ್ಷಣೆ ನೀಡಲು ಸಿಎಎಫ್, ಸಿಆರ್‌ಪಿಎಫ್ ಹಾಗೂ ಜಿಲ್ಲಾ ಪೊಲೀಸ್‌ನ ಜಂಟಿ ತಂಡ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಮಾವೋವಾದಿಗಳು ಹೊಂಚು ದಾಳಿ ನಡೆಸಿದರು. ಭದ್ರತಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದರು. ಈ ವೇಳೆ ಮಾವೋವಾದಿಗಳು ನಡೆಸಿದ ಐಇಡಿ ಸ್ಫೋಟಕ್ಕೆ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬ ಯೋಧ ಗಾಯಗೊಂಡರು.

 ‘‘ಬಸ್ತಾರ್ ಜಿಲ್ಲೆಯ ಬೋಡ್ಲಿ ಗ್ರಾಮದ ಸಮೀಪದ ಮಾವೋವಾದಿಗಳು ಸ್ಫೋಟಿಸಿದ ಐಇಡಿಗೆ ಇಬ್ಬರು ಯೋಧರು ಮೃತಪಟ್ಟಿದ್ದಾರೆ. ಮಾವೋವಾದಿಗಳು ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಯೋಧರು ಪ್ರತಿದಾಳಿ ನಡೆಸಿದರು. ಇದರಿಂದ ಓರ್ವ ಯೋಧನಿಗೆ ಗಾಯಗಳಾಗಿವೆ’’ ಎಂದು ಬಸ್ತಾರ್ ಐಜಿಪಿ ಸುಂದರ್ ರಾಜ್ ಪಿ. ಭಾಸ್ಕರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News