ದ್ವಿಚಕ್ರ ವಾಹನ ಕಳವು: ಆರೋಪಿ ಸೆರೆ
Update: 2020-03-14 22:38 IST
ಮಂಗಳೂರು, ಮಾ.14: ಉರ್ವ ಮತ್ತು ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಮೂರು ದ್ವಿಚಕ್ರ ವಾಹನಗಳನ್ನು ಕಳವುಗೈದ ಆರೋಪಿ ಸಾಗರ್ ಎಂಬಾತನನ್ನು ಉರ್ವ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ನಗರದ ಕೊಡಿಯಾಲಬೈಲ್ನ ಆರ್‌ಕೆ ರೆಸಿಡೆನ್ಸಿ ಹತ್ತಿರ, ಬಿಜೈ ಕೆಎಂಸಿ ಹಾಸ್ಟೆಲ್ ಗೇಟಿನ ಬಳಿಯಿಂದ, ಬಿಜೈ ಹೈಗ್ರೋ ಅಪಾರ್ಟ್‌ಮೆಂಟ್ ಬಳಿಯಿಂದ ದ್ವಿಚಕ್ರ ವಾಹನ ಕಳವು ಮಾಡಿದ್ದ. ಪೊಲೀಸರು ಕಳವುಗೈಯಲಾದ ಮೂರು ದ್ವಿಚಕ್ರ ವಾಹನಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಇವುಗಳ ಮೊತ್ತ 1.9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉರ್ವ ಎಸ್ಸೈ ಶ್ರೀಕಲಾ, ಎಎಸ್ಸೈಬಾಲಕೃಷ್ಣ, ಎಚ್‌ಸಿಗಳಾದ ವೆಂಕಟೇಶ್, ಸಂತೋಷ, ಪ್ರಮೋದ್, ಪಿಸಿಗಳಾದ ಪ್ರಕಾಶ್ ಸತ್ತಗಿಹಳ್ಳಿ, ಬಸವರಾಜ್ ಬಿರಾದಾರ್ ಪಾಲ್ಗೊಂಡಿದ್ದರು.