ಬೃಹತ್ ಪ್ರಮಾಣದಲ್ಲಿ ತೈಲ ಸಂಗ್ರಹಿಸಿಡಲು ಅಮೆರಿಕ ನಿರ್ಧಾರ: ಟ್ರಂಪ್

Update: 2020-03-14 17:17 GMT

ವಾಶಿಂಗ್ಟನ್, ಮಾ. 14: ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ತಲೆದೋರಿರುವ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವುದಕ್ಕಾಗಿ ಬೃಹತ್ ಪ್ರಮಾಣದ ತೈಲವನ್ನು ಖರೀದಿಸಲು ಹಾಗೂ ವಿದ್ಯಾರ್ಥಿ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲು ಅಮೆರಿಕ ಸರಕಾರ ನಿರ್ಧರಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.

ಮೊದಲು, ಕೊರೋನವೈರಸ್‌ನಿಂದಾಗಿ ಆರ್ಥಿಕ ಚಟುವಟಿಕೆಗಳು ಕುಸಿದ ಹಿನ್ನೆಲೆಯಲ್ಲಿ ತೈಲಕ್ಕೆ ಬೇಡಿಕೆ ಕಡಿಮೆಯಾಯಿತು. ಬಳಿಕ, ರಶ್ಯ ಮತ್ತು ಒಪೆಕ್ ದೇಶಗಳ ನಡುವಿನ ಜಗಳದಿಂದಾಗಿ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಯೋಜನೆಗೆ ಹಿನ್ನಡೆಯಾಯಿತು. ಹಾಗಾಗಿ, ಇತ್ತೀಚಿನ ದಿನಗಳಲ್ಲಿ ತೈಲ ಬೆಲೆಯಲ್ಲಿ ಕಡಿತ ಉಂಟಾಗಿದೆ.

‘‘ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸಿಡುವುದಕ್ಕಾಗಿ ಉತ್ತಮ ಬೆಲೆಯಲ್ಲಿ ಬೃಹತ್ ಪ್ರಮಾಣದ ಕಚ್ಚಾ ತೈಲವನ್ನು ಅಮೆರಿಕ ಸರಕಾರ ಖರೀದಿಸಲಿದೆ’’ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News