ಬೈಕಂಪಾಡಿ : ಅಡ್ಕ ಉರೂಸ್ ಸಮಾರೋಪ
ಮಂಗಳೂರು, ಮಾ.14: ಮುಹಿಯುದ್ದೀನ್ ಜುಮಾ ಮಸ್ಜಿದ್ ಮುಸ್ಲಿಂ ಜಮಾಅತ್ (ರಿ) ಬೈಕಂಪಾಡಿ ಇದರ ಅಧೀನದಲ್ಲಿರುವ ಹಝ್ರತ್ ಶೈಖ್ ಮಹಮೂದ್ ವಲಿಯುಲ್ಲಾಹ್ (ಖ.ಸ) ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭವು ದರ್ಗಾದ ವಠಾರದಲ್ಲಿ ಶನಿವಾರ ನಡೆಯಿತು.
ಸಮಾರಂಭದಲ್ಲಿ ಅಸೈಯ್ಯದ್ ಇಬ್ರಾಹೀಂ ತಂಙಳ್ ಕಡಲುಂಡಿ, ಡಾ. ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ದುವಾ ಆಶೀರ್ವಚನ ಗೈದರು.
ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಎಂಎಸ್ಎಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾಮಿಲ್, ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮುಖ್ಯ ಭಾಷಣಗೈದರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವಾ, ಕರ್ನಾಟಕ ಮುಸ್ಲಿಂ ಜಮಾಅತ್ ನ ದ.ಕ. ಜಿಲ್ಲಾಧ್ಯಕ್ಷ ಹಾಗೂ ಯೆನೆಪೊಯ ಯುನಿವರ್ಸಿಟಿಯ ಕುಲಪತಿ ವೈ. ಅಬ್ದುಲ್ಲಾ ಕುಂಞಿ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ನೂತನ ಅಧ್ಯಕ್ಷ ಅಬ್ದುಲ್ ಅಝೀಝ್, ಮಂಗಳೂರು ಮಹಾ ನಗರ ಪಾಲಿಕೆಯ ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್, ಮಿಸ್ಬಾ ಮಹಿಳಾ ಕಾಲೇಜಿನ ಅಧ್ಯಕ್ಷ ಹಾಜಿ ಬಿ.ಎಂ. ಮಮ್ತಾಝ್ ಅಲಿ, ಡೆಕ್ಕನ್ ಪ್ಯಾಕೇಜಿಂಗ್ ಇಂಡಿಯಾ ಪ್ರೈ. ಲಿ. ಮಾಲಕ ಅಸ್ಗರ್ ಅಲಿ, ಮುಕ್ಕ ಸೀ ಫುಡ್ ಮಾಲಕ ಮುಹಮ್ಮದ್ ಹಾರಿಸ್, ಹೋಮ್ ಫ್ಲಸ್ ಫರ್ನಿಚರ್ ಮಾಲಕ ಆಸೀಫ್ ಸುಫಿಯಾನ್, ಪಣಂಬೂರು ಮುಸ್ಲಿಂ ಜಮಾಅತ್ ಕಾಟಿಪಳ್ಳದ ಅಧ್ಯಕ್ಷ ಕೆ. ಅಹ್ಮದ್ ಬಾವಾ ಅಯ್ಯೂಬ್, ದ.ಕ. ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ, ಮುಹಿಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಹೈದರಾಲಿ ಸಖಾಫಿ, ಅಡ್ಕ ಗೌಸಿಯಾ ಮಸ್ಜಿದ್ ಇಮಾಮ್ ಖಾಸಿಂ ಸಅದಿ, ಎಸ್. ಎಂ. ರಶೀದ್, ಸಾಮಾಜಿಕ ಹೋರಾಟಗಾರ ಬಿ.ಎಂ. ಇಮ್ತಿಯಾಝ್ ಮುಂತಾದವರು ಉಪಸ್ಥಿತರಿದ್ದರು.
ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಸೈದುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಭಾರತದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಿ, ಗೌರವಿಸಿದರು.