ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ: ಶಿಖಾ ಪಾಂಡೆಗೆ ಐಎಎಫ್ ಗೌರವ

Update: 2020-03-15 06:11 GMT

ಹೊಸದಿಲ್ಲಿ, ಮಾ.14: ಈ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ, ಸ್ಕ್ವಾಡ್ರನ್ ಲೀಡರ್ ಶಿಖಾ ಪಾಂಡೆ ಅವರನ್ನು ಐಎಎಫ್ ಏರ್ ಮಾರ್ಷಲ್ ಎಂಎಸ್‌ಜಿ ಮೆನನ್ ಶನಿವಾರ ಗೌರವಿಸಿದರು.

 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಲೀಗ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸಿದ ಶಿಖಾ ಮೆಗಾ ಸ್ಪರ್ಧೆಯ ಐದು ಇನಿಂಗ್ಸ್‌ಗಳಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.

 ಫೈನಲ್ ಪಂದ್ಯದಲ್ಲಿ ಶಿಖಾ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. 4 ಎಸೆತಗಳಲ್ಲಿ ಕೇವಲ 2 ರನ್ ಗಳಿಸಿದ್ದರು. ಮಾರ್ಚ್ 8ರಂದು ನಡೆದಿದ್ದ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಮಣಿಸಿದ್ದ ಆಸ್ಟ್ರೇಲಿಯ ಮಹಿಳಾ ತಂಡ ಐದನೇ ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು. ಈ ಟೂರ್ನಿಗಿಂತ ಮೊದಲು ಆಸ್ಟ್ರೇಲಿಯ ತಂಡ 2010, 2012, 2014 ಹಾಗೂ 2018ರಲ್ಲಿ ಪ್ರಶಸ್ತಿ ಜಯಿಸಿತ್ತು. ಭಾರತ ಇದೇ ಮೊದಲ ಬಾರಿ ಮಹಿಳಾ ವಿಶ್ವಕಪ್ ಟ್ವೆಂಟಿ-20 ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News