'ಖಾಸಗಿ ಬ್ಯಾಂಕ್ ಗಳಲ್ಲಿರುವ ಖಾತೆ ಮುಚ್ಚಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಖಾತೆಗಳನ್ನು ವರ್ಗಾಯಿಸಿ '

Update: 2020-03-15 09:51 GMT

ಮುಂಬೈ: ಆರ್ ಬಿಐನ ಶಿಫಾರಸನ್ನು ಕಡೆಗಣಿಸುವ ನಡೆಯೊಂದರಲ್ಲಿ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರಕಾರವು ಸರಕಾರದ ಎಲ್ಲಾ ಇಲಾಖೆಗಳ ಬ್ಯಾಂಕ್ ಖಾತೆಗಳನ್ನು ಖಾಸಗಿ ಬ್ಯಾಂಕ್ ಗಳಿಂದ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ವರ್ಗಾಯಿಸಲು ಆದೇಶಿಸಿದೆ.

ಶುಕ್ರವಾರ ಹಣಕಾಸು ಇಲಾಖೆಯು ಈ ಆದೇಶವನ್ನು ಹೊರಡಿಸಿದ್ದು, ಎಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಈ ಆದೇಶದ ಪ್ರಕಾರ ಎಲ್ಲಾ ಇಲಾಖೆಗಳು ಸಹಕಾರಿ ಮತ್ತು ಖಾಸಗಿ ಬ್ಯಾಂಕ್ ಗಳಲ್ಲಿರುವ ಖಾತೆಗಳನ್ನು ರದ್ದಗೊಳಿಸಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಬೇಕಾಗಿದೆ. ಇದು ವೇತನ ಖಾತೆಗಳು, ಸರಕಾರದ ಇತರ ಹಣಕಾಸು ಖಾತೆಗಳು, ಉಪ ವಿಭಾಗಗಳು, ಮಹಾನಗರಪಾಲಿಕೆಗಳ ಖಾತೆಗಳನ್ನು ಒಳಗೊಂಡಿದೆ.

ಐಸಿಐಸಿಐ ಬ್ಯಾಂಕ್ ನಲ್ಲಿ ಬೃಹತ್ ಮುಂಬೈ ಮಹಾನಗರ ಪಾಲಿಕೆಯ 329 ಕೋಟಿ ರೂ. ಮೊತ್ತದ ಖಾತೆಯಿದ್ದು, ಅದನ್ನೂ ರಾಷ್ಟ್ರೀಕೃತ ಬ್ಯಾಂಕ್ ಗೆ ವರ್ಗಾಯಿಸಲಾಗುವುದು.

ಖಾಸಗಿ ಹೂಡಿಕೆದಾರರಲ್ಲಿ ಅನಗತ್ಯ ಆತಂಕವಿದ್ದು, ಯಾವುದೇ ರಾಜ್ಯ ಸರಕಾರಗಳು ಖಾಸಗಿ ವಲಯದ ಬ್ಯಾಂಕ್ ಗಳಿಂದ ತಮ್ಮ ಠೇವಣಿಯನ್ನು ವರ್ಗಾಯಿಸಬಾರದು ಎಂದು ಇತ್ತೀಚೆಗಷ್ಟೇ ಆರ್ ಬಿಐ ಪತ್ರ ಬರೆದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News