ದೇಶದಲ್ಲಿ ಕೊರೊನಾವೈರಸ್ ನಿಂದ ಬಳಲುತ್ತಿರುವವರ ಸಂಖ್ಯೆ 107ಕ್ಕೇರಿಕೆ
Update: 2020-03-15 16:29 IST
ಹೊಸದಿಲ್ಲಿ: ದೇಶದಲ್ಲಿ ಕೊರೊನಾವೈರಸ್ ನಿಂದ ಬಳಲುತ್ತಿರುವವರ ಸಂಖ್ಯೆ 107ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 31 ಪ್ರಕರಣಗಳು ವರದಿಯಾಗಿವೆ.
ಕೇರಳದಲ್ಲಿ 22 ಪ್ರಕರಣಗಳು ವರದಿಯಾಗಿದ್ದು, ಉತ್ತರ ಪ್ರದೇಶದಲ್ಲಿ 11 ಪ್ರಕರಣಗಳು ದೃಢಪಟ್ಟಿವೆ. ದಿಲ್ಲಿಯಲ್ಲಿ ಇದುವರೆಗೆ 7 ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.