×
Ad

ದುಬೈಯಿಂದ ಬಂದ ಭಟ್ಕಳದ ಯುವಕರಲ್ಲಿ ಕೊರೋನಾ ವೈರಸ್ ಇಲ್ಲ: ಸಹಾಯಕ ಆಯುಕ್ತರ ಸ್ಪಷ್ಟನೆ

Update: 2020-03-15 16:33 IST

ಭಟ್ಕಳ: ದುಬೈಯಿಂದ ಮಾ.5ರಂದು ಭಟ್ಕಳಕ್ಕೆ ಬಂದ 13 ಮಂದಿ ಕೊರೋನಾ ವೈರಸ್ ಶಂಕಿತರಾಗಿದ್ದಾರೆ ಎನ್ನುವ ವಾಟ್ಸ್ಆ್ಯಪ್ ಸಂದೇಶವೊಂದು ರವಿವಾರ ಬೆಳಗ್ಗೆಯಿಂದ ಹರಿದಾಡುತ್ತಿದ್ದು, ಸಹಾಯಕ ಅಯುಕ್ತ ಎಸ್. ಭರತ್ ಹಾಗೂ ಆರೋಗ್ಯಾಧಿಕಾರಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಸಹಾಯಕ ಆಯುಕ್ತರು ಮಾತನಾಡಿ, ಇದು ಯಾವುದೇ ಹೊಸ ಪ್ರಕರಣವಲ್ಲ. ನಮಗೆ ಈ ಕುರಿತು ಸಂಪೂರ್ಣ ಮಾಹಿತಿ ಇದೆ. ಮಾ.5 ರಂದು ದುಬೈಯಿಂದ ಬಂದ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗಿದೆ ಮತ್ತು ತಾಲೂಕು ಆರೋಗ್ಯಾಧಿಕಾರಿ ಹಾಗೂ ತಹಶೀಲ್ದಾರ್ ದುಬೈಯಿಂದ ಬಂದವರ ಮನೆಗಳಿಗೆ ಹೋಗಿ ವಿಚಾರಣೆ ಮಾಡುತ್ತಿದ್ದಾರೆ. ಕೊರೋನಾ ವೈರಸ್ ಪತ್ತೆಯಾಗಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು 'ವಾರ್ತಾಭಾರತಿ' ಪ್ರತಿನಿಧಿ ದುಬೈಯಿಂದ ಭಟ್ಕಳಕ್ಕೆ ಬಂದಿದ್ದ ಇಬ್ಬರನ್ನು ಸಂಪರ್ಕಿಸಿದ್ದು, ಪ್ರತಿದಿನ ಆರೋಗ್ಯಾಧಿಕಾರಿಗಳನ್ನು ಭೇಟಿಯಾಗಿ ತಪಾಸಣೆ ಮಾಡಿಸುತ್ತಿದ್ದು, ನಾವು ಆರೋಗ್ಯವಾಗಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News