×
Ad

ಕೊರೋನಾ ಸೋಲಿಸೋಣ ಜಾಗೃತಿ ಅಭಿಯಾನ

Update: 2020-03-15 20:05 IST

ಕೋಟ, ಮಾ.15: ಉಡುಪಿಯ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಕೊರೋನಾ ಸೋಲಿಸೋಣ ಜಾಗೃತಿ ಅಭಿಯಾನವನ್ನು ರವಿವಾರ ಕೋಟದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಅಭಿಯಾನಕ್ಕೆ ರಾಜ್ಯ ಮೀನುಗಾರಿಕಾ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು. ಬಳಿಕ ಸಂಘಟನೆ ಕಾರ್ಯಕರ್ತರು ಕೋಟ, ಮಣೂರು, ಪಡುಕರೆ, ಕೋಟತಟ್ಟು ಹಾಗೂ ಅಮೃತೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಸಾರ್ವಜನಿಕರಿಗೆ ಕರಪತ್ರ ವಿತರಿಸುವ ಮೂಲಕ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಸ್ವಚ್ಛ ಭಾರತ್ ಫ್ರೆಂಡ್ಸ್ ಸ್ಥಾಪಕ ಗಣೇಶ್‌ಪ್ರಸಾದ್ ಜಿ.ನಾಯಕ್, ಕುಂದಾಪುರ ವಲಯ ಸಂಯೋಜಕ ವಿವೇಕ್, ಹರೀಶ್ ಶೆಟ್ಟಿ, ಕಾರಂತ ಥೀಮ್ ಪಾರ್ಕ್‌ನ ಟ್ರಸ್ಟಿಗಳಾದ ಸುಬ್ರಾಯ ಆಚಾರ್, ವಿವೇಕ್ ಅಮೀನ್, ಕುಶಾಲ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News