×
Ad

ಮಾ.17ರಿಂದ ಅರಸ್ತಾನ ದರ್ಗಾ ಉರೂಸ್ ಕಾರ್ಯಕ್ರಮ

Update: 2020-03-15 20:29 IST

ಮಂಗಳೂರು, ಮಾ.15: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸೀದಿ ಮತ್ತು ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ 44ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಯೀ ರಾತೀಬ್, ಮಜ್ಲಿಸುನ್ನೂರ್ ಹಾಗೂ ಧಾರ್ಮಿಕ ಉಪನ್ಯಾಸ ಮತ್ತು ಅರಸ್ತಾನ ದರ್ಗಾ ಉರೂಸ್ ಕಾರ್ಯಕ್ರಮವು ಮಾ.17ರಿಂದ 22ರವರೆಗೆ ನಡೆಯಲಿದೆ.

ಮಾ.17ರಂದು ಇಶಾ ನಮಾಝ್ ಬಳಿಕ ದ.ಕ.ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜಮಾಅತ್ ಅಧ್ಯಕ್ಷ ಅಲ್ತಾಫ್ ಅಹ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಎಂಜೆಎಂ ಖತೀಬ್ ಮುಹಮ್ಮದ್ ಇಕ್ಬಾಲ್ ಫೈಝಿ ಪ್ರವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಮಾಅತ್‌ನ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಹಂಝ ಮಲಾರ್, ಉಪಾಧ್ಯಕ್ಷ ಟಿ. ನಾಸಿರ್, ಮದ್ರಸದ ಸದ್‌ರ್ ಮುಅಲ್ಲಿಂ ಇಮ್ರಾನ್ ಅಝ್‌ಹರಿ, ಮುಅದ್ಸಿನ್ ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್, ಸದಸ್ಯ ಎಂಪಿ ಹಸನ್, ಎಂಜೆಎಂ ಖತೀಬ್ ಮುಹಮ್ಮದ್ ಹನೀಫ್ ಫೈಝಿ, ಬಿಜೆಎಂ ಖತೀಬ್ ಹನೀಫ್ ಸಅದಿ, ಖಾಲಿದ್ ಬಿನ್ ವಲೀದ್ ಮಸ್ಜಿದ್‌ನ ಖತೀಬ್ ರಫೀಖ್ ಅಝ್‌ಹರಿ ಆನೆಕಲ್ಲು ಭಾಗವಹಿಸಲಿದ್ದಾರೆ.

ಮಾ.18ರಂದು ಅಥಾವುಲ್ಲಾ ಇಮಾಮಿ ಕುಪ್ಪೆಟ್ಟಿ, ಮಾ.19ರಂದು ಉಸ್ತಾದ್ ಅಬ್ಬಾಸ್ ದಾರಿಮಿ ಫರಂಗಿಪೇಟೆ, ಮಾ.20ರಂದು ಕೆ.ಪಿ. ಸಿರಾಜುದ್ದೀನ್ ಸಖಾಫಿ ಕನ್ಯಾನ, ಮಾ.21ರಂದು ಉಸ್ತಾದ್ ಅನ್ಸಾರ್ ಫೈಝಿ ಬುರ್ಹಾನಿ ಪ್ರವಚನ ನೀಡಲಿದ್ದಾರೆ. ಮಾ.22ರಂದು ನಡೆಯುವ ಉರೂಸ್ ಹಾಗೂ ಸಮಾರೋಪ ಕಾರ್ಯಕ್ರಮದಲ್ಲಿ ಸೈಯದ್ ಅಲೀ ತಂಙಳ್ ಕುಂಬೋಳ್ ದುಆಗೈಯುವರು. ಆದಂ ಫೈಝಿ ಮುಖ್ಯ ಪ್ರಭಾಷಣ ನೀಡುವರು. ಶಾಸಕ ಯುಟಿ ಖಾದರ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಶಮೀರ್ ಟಿಪ್ಪುನಗರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News