×
Ad

ಕೊರೊನಾವೈರಸ್: ಕೇಂದ್ರ, ಪಶ್ಚಿಮ ರೈಲ್ವೆಯ ಎ.ಸಿ. ಬೋಗಿಯಲ್ಲಿ ಹೊದಿಕೆ ಪೂರೈಕೆ ಇಲ್ಲ

Update: 2020-03-15 20:42 IST

ಮುಂಬೈ: ರೈಲಿನ ಎಸಿ ಬೋಗಿಯ ಹೊದಿಕೆ ಹಾಗೂ ಕಿಟಕಿ ಪರದೆಯನ್ನು ದಿನಂಪ್ರತಿ ಸ್ವಚ್ಛಗೊಳಿಸದೇ ಇರುವುದರಿಂದ ಅದನ್ನು ಹಿಂದೆ ಪಡೆಯುವಂತೆ ಕೇಂದ್ರ ಹಾಗೂ ಪಶ್ಚಿಮ ರೈಲ್ವೆ ಶನಿವಾರ ಆದೇಶಿಸಿದೆ.

ಉಳಿದ ವಸ್ತುಗಳಾದ ಟವಲ್, ತಲೆದಿಂಬು ಹೊದಿಕೆ ಹಾಗೂ ಬೆಡ್‌ರೋಲ್‌ಗಳನ್ನು ಪ್ರತಿದಿನ ಸ್ವಚ್ಚಗೊಳಿಸಲಾಗುತ್ತಿದೆ.

‘‘ಎಸಿ ಬೋಗಿಗಳಲ್ಲಿ ಪೂರೈಸುವ ಪರದೆ ಹಾಗೂ ಹೊದಿಕೆಯನ್ನು ಪ್ರತಿ ಪಯಣದ ನಂತರ ಸ್ವಚ್ಚಗೊಳಿಸುವುದಿಲ್ಲ. ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೆ ಪರದೆ ಹಾಗೂ ಹೊದಿಕೆಯನ್ನು ಹಿಂಪಡೆಯಲಾಗಿದೆ’’ ಎಂದು ಆದೇಶದಲ್ಲಿ ಹೇಳಲಾಗಿದೆ.

 ‘‘ತಮಗೆ ಬೇಕಾದ ಹೊಂದಿಕೆಗಳನ್ನು ತರುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ. ಯಾವುದೇ ರೀತಿಯ ಅಗತ್ಯ ಕಂಡು ಬಂದರೆ ಪೂರೈಸಲು ಕೆಲವು ಹೆಚ್ಚುವರಿ ಹೊದಿಕೆಗಳನ್ನು ಇರಿಸಲಾಗಿದೆ’’ ಎಂದು ಪಶ್ಚಿಮ ರೈಲ್ವೆಯ ವಕ್ತಾರ ಗಜಾನನ ಮಹತ್ಪುರ್ಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News