ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
Update: 2020-03-15 21:37 IST
ಬ್ರಹ್ಮಾವರ, ಮಾ.15: ವಿಪರೀತ ಮದ್ಯಪಾನ ಸೇವಿಸುವ ಚಟ ಹೊಂದಿದ್ದ 33ನೇ ಶಿರೂರು ಗ್ರಾಮದ ಮೂಡುಗುಡ್ಡೆಯ ಸುರೇಂದ್ರ ನಾಯ್ಕ್(43) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾ.14ರಂದು ಮಧ್ಯಾಹ್ನ ವೇಳೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯಡ್ಕ: ಟಿಬಿ ಖಾಯಿಲೆ ಬಳಲುತ್ತಿದ್ದ ಬೆಳ್ಳಂಪಳ್ಳಿ ಗ್ರಾಮದ ಅಂಗಡಿಮನೆಯ ನಾತು ಶೆಟ್ಟಿ ಎಂಬವರ ಮಗ ರಮಾನಂದ ಶೆಟ್ಟಿ(37) ಎಂಬವರು ಮಾನಸಿಕವಾಗಿ ನೊಂದು ಮಾ.14ರಂದು ಸಂಜೆ ಮನೆಯ ಪಕ್ಕದ ಬೊಬ್ಬರ್ಯ ದೇವಸ್ಥಾನದ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.