ತೈಲ ಬೆಲೆ ಹೆಚ್ಟಳದೊಂದಿಗೆ ಜನಸಾಮಾನ್ಯರ ಲೂಟಿ: ಕಾಂಗ್ರೆಸ್
ಉಡುಪಿ, ಮಾ.15: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಫಾ ತೈಲ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ ಸರಕಾರ ಪೆಟ್ರೋಲ್ ಮತ್ತು ಡಿಸೆಲ್ ಮೇಲಿನ ಅಬಕಾರಿ ಸುಂಕ ಏರಿಸಿ ಕಚ್ಫಾ ತೈಲ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ದೊರೆಯದಂತೆ ತಡೆಹಿಡಿದಿರುವುದು ಖಂಡನೀಯ. ತೈಲ ಬೆಲೆ ಇಳಿಕೆಯ ಲಾಭ ಜನರಿಗೆ ದೊರಕಬಹುದು ಎಂಬ ನಿರೀಕ್ಷೆಯು ಕೇಂದ್ರದ ಈ ನಡೆಯಿಂದ ಹುಸಿಯಾಗಿದೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.
ಸೆಲ್ಪೋನ್ ಮೇಲಿನ ಜಿಎಸ್‌ಟಿಯನ್ನು ಹೆಚ್ಚಳ ಮಾಡಿ ಕೇಂದ್ರ ಸರಕಾರ ಜನಸಾಮಾನ್ಯರನ್ನು ಲೂಟಿಗಿಳಿದಿದೆ. ಮೊಬೈಲ್ ಪೋನ್ ಪ್ರಸ್ತುತ ಪರಿಸ್ಥಿತಿ ಯಲ್ಲಿ ಅವಶ್ಯಕತೆಯ ವಸ್ತುವಾಗಿ ಜನಸಾಮಾನ್ಯನೂ ಬಳಕೆ ಮಾಡುವ ವಸ್ತುವಾಗಿದೆ. ಹೀಗಿರುವಾಗ ಮೊಬೈಲ್ ಬೆಲೆ ಹೆಚ್ಚಳ ಮಾಡುವ ಮೂಲಕ ಸರಕಾರ ಜನಸಾಮಾನ್ಯನಿಗೆ ಹೆಚ್ಚಿನ ಹೊರೆ ನೀಡಿದೆ. ಕೇಂದ್ರ ಸರಕಾರ ತನ್ನ ಸ್ವಯಂಕೃತ ಅಪರಾಧದಿಂದ ಹೊರಬರಲು ಜನಸಾಮಾನ್ಯರ ಜೇಬಿಗೆ ನಿರಂತರವಾಗಿ ಕತ್ತರಿ ಪ್ರಯೋಗ ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ದೂರಿದ್ದಾರೆ.