×
Ad

ಕರೋನಾ ವೈರಸ್ ಭೀತಿ ಹಿನ್ನೆಲೆ: ದ.ಕ.ಜಿಲ್ಲೆಯಲ್ಲಿ 377 ಮಂದಿಯ ಆರೋಗ್ಯ ತಪಾಸಣೆ

Update: 2020-03-15 21:44 IST

ಮಂಗಳೂರು, ಮಾ.15: ಕರೋನಾ ವೈರಸ್ ಭೀತಿ ಹಿನ್ನಲೆಯಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ಕಾರ್ಯವು ತೀವ್ರಗೊಳಿಸಲಾಗಿದ್ದು, ರವಿವಾರ ದ.ಕ.ಜಿಲ್ಲೆಯಲ್ಲಿ 377 ಮಂದಿಯ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಈವರೆಗೆ ಜಿಲ್ಲೆಯಲ್ಲಿ 106 ಮಂದಿಯನ್ನು ಅವರ ಮನೆಯಲ್ಲೇ ನಿಗಾದಲ್ಲಿರಿಸಲಾಗಿದೆ. ರವಿವಾರ ಮತ್ತೆ 11 ಮಂದಿಯ ಗಂಟಲಿನ ದ್ರವವನ್ನು ಸ್ಯಾಂಪಲ್ ಟೆಸ್ಟ್ ಗಾಗಿ ಹಾಸನದ ಆಸ್ಪತ್ರೆಗೆ ಕಳಿಸಲಾಗಿದೆ. ಈ ಹಿಂದೆ ಕಳುಹಿಸಿದ 8 ಸ್ಯಾಂಪಲ್ ವಾಪಸ್ ಬಂದಿದ್ದು, ಅವೆಲ್ಲವೂ ನೆಗೆಟಿವ್ ರಿಪೋರ್ಟ್ ಬಂದಿದೆ. ರವಿವಾರ 9 ಮಂದಿಯನ್ನು ಬೇರೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

ಗೊಂದಲಕ್ಕೆ ಒಳಗಾಗಬೇಡಿ

ಯಾರು ಕೂಡಾ ಗೊಂದಲಕ್ಕೆ ಒಳಗಾಗಬೇಡಿ. ಸಾಮಾನ್ಯ ಶೀತ ಜ್ವರಕ್ಕೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ದೂರ ಪ್ರಯಾಣ ಮಾಡಿದವರು ತಕ್ಷಣ ಜಿಲ್ಲಾಡಳಿತವನ್ನು ಸಂಪರ್ಕಿಸಬೇಕು. ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಹಾಸ್ಟೆಲ್ಗಳಿಂದ ಕೋವಿಡ್ ಫ್ರೀ ಸರ್ಟಿಫಿಕೆಟ್ ಕೇಳುತ್ತಿರುವ ಮಾಹಿತಿ ಬಂದಿದೆ. ಯಾರಿಗೂ ಈ ರೀತಿಯ ಸರ್ಟಿಫಿಕೇಟ್ ತನ್ನಿ ಎಂದು ಸೂಚಿಸುವ ಅಗತ್ಯವಿಲ್ಲ. ಯಾವುದೇ ವದಂತಿಗಳಿಗೂ ಕಿವಿ ಕೊಡಬೇಡಿ ಎಂದು ಡಿಸಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News