ವಿಟ್ಲಕ್ಕೆ ಆಗಮಿಸಿದ ಸಂಸದೆ ಪ್ರಜ್ಞಾಸಿಂಗ್

Update: 2020-03-15 16:58 GMT

ವಿಟ್ಲ: ಸಾಂಕ್ರಾಮಿಕ ರೋಗಕ್ಕೆ ಭಯಭೀತರಾಗುವ ಬದಲು ಸಾವಧಾನವಾಗಿರಬೇಕು. ಸಾಮಾಜಿಕ ಬದ್ಧತೆಯ ನಿಟ್ಟಿನಲ್ಲಿ, ಸಾಂಕ್ರಾಮಿಕ ರೋಗ ತಡೆಗಟ್ಟುವ ಸಲುವಾಗಿ, ಕಾರ್ಯಕ್ರಮ ಮುಂದೂಡಲಾಗಿದೆಯಾದರೂ, ಮತ್ತೆ ಹಿಂದು ವಿರಾಟ್ ಸ್ವರೂಪದಲ್ಲಿಯೇ ನಡೆಯಲಿದೆ ಎಂದು ಮಧ್ಯಪ್ರದೇಶದ ಭೋಪಾಲ್ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದರು.

ಅವರು ರವಿವಾರ ವಿಟ್ಲ ಪರಿಸರಕ್ಕೆ ಆಗಮಿಸಿ, ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ಅವರ ಮನೆಗೆ ತೆರಳಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ವಾಗತಿಸುವಾಗ ತುಳಸಿ ಹಾರ ಹಾಕಿದ್ದು, ಅದರ ಸುಗಂಧವನ್ನು ಆಸ್ವಾಧಿಸಿದಾಗ ನನಗೆ ನಿರೋಗಿಯ ಅನುಭವವಾಯಿತು. ದೇಶದಲ್ಲಿ ಶ್ರೇಷ್ಠವಾದ ತುಳಸಿ, ಗೋವು, ಗಂಗಾಜಲವಿದ್ದು, ಇದು ರೋಗರಹಿತರನ್ನಾಗಿಸುವ ಅಮೃತ ಔಷಧೀಯ ವಸ್ತುಗಳು ಎಂದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ವಿಟ್ಲ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಂ.ಹರೀಶ್ ನಾಯಕ್ ವಿಟ್ಲ, ಕಾರ್ಯಾಧ್ಯಕ್ಷ ಕೃಷ್ಣಪ್ಪ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ವಿಟ್ಲ, ಅಕ್ಷಯ್, ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರ್, ಕಾರ್ಯದರ್ಶಿ ನರಸಿಂಹ ಶೆಟ್ಟಿ ಮಾಣಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News