×
Ad

ಕಡೆಕಾರು: ಮನೆಯಲ್ಲೇ ಪೈಪ್‌ ಕಾಂಪೋಸ್ಟ್ ಗೊಬ್ಬರ ತಯಾರಿಗೆ ಮಾಹಿತಿ

Update: 2020-03-16 20:43 IST

ಉಡುಪಿ, ಮಾ.16: ತ್ಯಾಜ್ಯ ನಿರ್ವಹಣೆಯ ಮಹತ್ವ ಹಾಗೂ ಮನೆಮಟ್ಟ ದಲ್ಲೇ ಪೈಪ್ ಅಳವಡಿಸಿ ಅಸಮರ್ಪಕ ತ್ಯಾಜ್ಯ ದಿಂದಾಗುವ ಅನಾಹುತ ಗಳನ್ನು ನಿಭಾಯಿಸುವ ಜವಾಬ್ದಾರಿ ಪ್ರತೀಮನೆಗಳಲ್ಲಿ ನಡೆದರೆ, ತ್ಯಾಜ್ಯ ದಿಂದ ಸ್ವಾಸ್ಥ್ಯದ ಮೇಲೆ ಆಗುವ ಪರಿಣಾಮವನ್ನು ನಿಯಂತ್ರಿಸಬಹುದು ಎಂದು ಮಣಿಪಾಲ ಕೆಎಂಸಿ ಸಮುದಾಯ ವೈದ್ಯಕೀಯ ವಿಭಾಗದ ಪ್ರೊ. ಡಾ.ಪವನ್‌ ಕುಮಾರ್ ಹೇಳಿದ್ದಾರೆ.

ಸಮುದಾಯ ವೈದ್ಯಕೀಯ ವಿಭಾಗದ ಕಡೆಕಾರಿನ ಗ್ರಾಮೀಣ ಹೆರಿಗೆ ಮತ್ತು ಮಕ್ಕಳ ಕಲ್ಯಾಣಕೇಂದ್ರದಲ್ಲಿ ಕಡೆಕಾರಿನ ಚೈತನ್ಯ ಸೋಶಿಯಲ್ ವೆಲ್ಫೇರ್ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿನಡೆದ ಪೈಪ್ ಕಾಂಪೋಸ್ಟ್ ಅಳವಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಜೋಸೆಫ್ ಜಿ.ಎಂ. ರೆಬೆಲ್ಲೋ ಪೈಪ್‌ಕಾಂಪೋಸ್ಟ್ ಅಳವಡಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡುತ್ತಾ ‘ಹಸಿಕಸ, ಒಣಕಸ, ದ್ರವಯುಕ್ತ ತ್ಯಾಜ್ಯವನ್ನು ಮನೆ ಮಟ್ಟದಲ್ಲಿ ನಿರ್ವಹಣೆ ಮಾಡಿ ಪೈಪ್‌ಕಾಂಪೋಸ್ಟ್ ಮೂಲಕ ಸಾವಯವಯುಕ್ತ ರಸಗೊಬ್ಬರವನ್ನು ಪಡೆಯಬಹುದು.’ ಎಂದರು.

ಕಡೆಕಾರು ಗ್ರಾಪಂ ಅಧ್ಯಕ್ಷ ರಘುನಾಥ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೈತನ್ಯಸೋಶಿಯಲ್ ವೆಲ್ಫೇರ್ ಟ್ರಸ್ಟ್ನ ಪ್ರವರ್ತಕ ಸುನಿಲ್ಸಾಲ್ಯಾನ್, ತಾಪಂ ಸದಸ್ಯೆ ಶಿಲ್ಪಾ ರವೀಂದ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿಸೋಜ, ಸದಸ್ಯರಾದ ಪ್ರವೀಣ್ ಶೆಟ್ಟಿ, ಜಯಕರಶೆರಿಗಾರ್, ಜಿತಿನ್ ಕಡೆಕಾರ್, ಸಮುದಾಯ ವೈದ್ಯಕೀಯ ವಿಭಾಗ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೇಂದ್ರದ ಉಸ್ತುವಾರಿ ವೈದ್ಯಾಧಿಕಾರಿ ಡಾ.ಮುರುಳೀಧರ್ ಕುಲಕರ್ಣಿ ಪ್ರಾಸ್ತಾವಿಕವಾಗಿಮಾತನಾಡಿದರು. ನೀಲಾವತಿ ಕಾರ್ಯಕ್ರಮನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News