ಮಹಿಳಾ ದಿನಾಚರಣೆ: ಮಾತಾಜಿ ಶಕುಂತಲಾರಿಗೆ ಸನ್ಮಾನ
Update: 2020-03-16 20:49 IST
ಉಡುಪಿ, ಮಾ.16: ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜಿನ ಅಗದತಂತ್ರ ಸ್ನಾತಕೋತ್ತರ ವಿಭಾಗದ ವತಿಯಿಂದ ಅಂತಾರಾಷ್ಟೀಯ ಮಹಿಳಾ ದಿನಾಚರಣೆಯ ಅಂಗವಾಗಿ ಶ್ರೀಕೃಷ್ಣ ಬಾಲಾ ನಿಕೇತನದ ಮಕ್ಕಳ ಕ್ಷೇಮದ ಜವಾಬ್ದಾರಿ ವಹಿಸಿಕೊಂಡಿರುವ ಸಂಸ್ಥೆಯ ಮಾತಾಜಿ ಶಕುಂತಲಾ ಅವರನ್ನು ಬಾಲನಿಕೇತನದಲ್ಲಿ ಇತ್ತೀಚೆಗೆ ಸನ್ಮಾನಿಸ ಲಾಯಿತು.
ಈ ಸಂದರ್ಭದಲ್ಲಿ ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ.ಚೈತ್ರಾ ಹೆಬ್ಬಾರ್, ಪ್ರಾಧ್ಯಾಪಕರಾದ ಡಾ.ಶ್ರೀನಿಧಿ ಆರ್., ಡಾ.ರವಿಕೃಷ್ಣ ಎಸ್., ಡಾ.ನೀರಜ್ ಎ.ಕೆ., ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಆಶ್ವೀಜ ಎನ್.ಎಚ್., ಡಾರಕ್ಷಿತ್ ಎನ್.ಎನ್., ಡಾ.ಪ್ರೇರಕ್ ರೆಗ್ಮೀ, ಡಾ.ಶ್ರೀಲಕ್ಷೀ ಎ., ಡಾ.ಅನನ್ಯಾ ಬಿ., ಡಾ. ರೇಖಾ ಪಾಟಿಲ್, ಡಾ.ರೇವತಿ ವಿ., ಡಾ ಇನೋಶ್ ಮನುಜೋಸೆಫ್ ಮೊದ ಲಾದವರು ಉಪಸ್ಥಿತರಿದ್ದರು.