×
Ad

‘ರಿಕ್ಷಾ ಚಾಲಕರು ನೆರೆಕರೆ ಕುಟುಂಬಗಳಿಗೂ ಆಶ್ರಯದಾತರು’

Update: 2020-03-16 20:51 IST

ಶಿರ್ವ, ಮಾ.16: ವಿದ್ಯಾವಂತರು ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡುತ್ತಿದ್ದು, ಹಳ್ಳಿಗಳು ಇಂದು ವೃದ್ದಾಶ್ರಮ ಗಳಾಗುತ್ತಿವೆ. ರಿಕ್ಷಾ ಚಾಲಕರು ತಮ್ಮ ಕುಟುಂಬದ ಜೊತೆಯಲ್ಲಿದ್ದು, ತಮ್ಮ ನೆರೆಕರೆಯ ಕುಟುಂಬಗಳಿಗೂ ಆಶ್ರಯದಾತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಬದುಕಿನ ರೂವಾರಿಗಳು ನಾವೇ ಆಗಿದ್ದು, ಸಾಧನೆಯ ಮೂಲಕ ಬದುಕು ಸಾರ್ಥಕಗೊಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ಸಮಾಜಸೇವಕ ಕುತ್ಯಾರು ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ರವಿವಾರ ನಡೆದ ಕುರ್ಕಾಲು ಸುಬಾಸ್‌ನಗರ ಆಟೋರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ 7ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡುತಿದ್ದರು.

ಮುಖ್ಯ ಅತಿಥಿಗಳಾಗಿ ಕುರ್ಕಾಲು ಗ್ರಾಪಂ ಅಧ್ಯಕ್ಷೆ ಶೋಬಾ ಸಾಲಿಯಾನ್, ಉದ್ಯಮಿಗಳಾದ ಆಂತೋನಿ ಡೇಸಾ, ಡೇನಿಯಲ್ ಸಿ.ಅಮ್ಮನ್ನ, ಸಂಘಟನೆಯ ಗೌರವ ಅಧ್ಯಕ್ಷ ಭುವನೇಶ್ ಎಲ್.ಪೂಜಾರಿ, ಉಡುಪಿ ಅಗ್ನಿಶಾಮಕದಳದ ಲೀಡಿಂಗ್ ಪೈರ್‌ಮೆನ್ ಅಶ್ವಿನ್ ಸನಿಲ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಂಕರಪುರ ಸೈಂಟ್ ಜೋನ್ಸ್ ಪ್ರೌಢ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಮೋಹನ್‌ದಾಸ್ ಆರ್.ಶೆಟ್ಟಿ, ಔಷಧಶಾಸ್ತ್ರ ವಿಭಾಗ ದಲ್ಲಿ ಚಿನ್ನದ ಪದಕ ವಿಜೇತೆ ರೀನಲ್ ಶ್ವೇತಾ ಆಳ್ವ ಅವರನ್ನು ಸನ್ಮಾನಿಸಲಾಯಿತು. ವಿಶ್ರಾಂತ ರಿಕ್ಷಾ ಚಾಲಕ ಸದಾಶಿವ ಆಚಾರ್ಯ, ಅಪ ಘಾತ ರಹಿತ ಹಿರಿಯ ರಿಕ್ಷಾ ಚಾಲಕ ಲಾರೆನ್ಸ್ ಲೋಬೋ ಅವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಚಂದ್ರ ಪೂಜಾರಿ ವಹಿಸಿದ್ದರು. ಕಾರ್ಯದರ್ಶಿ ಪ್ರಬಾಕರ ಶೇರಿಗಾರ್ ವರದಿ ವಾಚಿಸಿದರು. ಉಪಾಧ್ಯಕ್ಷ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಮಹೇಶ್, ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಉಪಸ್ಥಿತರಿ ದ್ದರು. ಮಹಮ್ಮದ್ ಹನೀಫ್ ಕಾರ್ಯ ಕ್ರಮ ನಿರೂಪಿಸಿದರು. ಗಣೇಶ್ ಅಂಚನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News