×
Ad

ಜೇಸಿಐ ಉದ್ಯಾವರ- ಕುತ್ಪಾಡಿ ಪದಾಧಿಕಾರಿಗಳ ಪದಗ್ರಹಣ

Update: 2020-03-16 21:08 IST

ಉಡುಪಿ, ಮಾ.16: ವಲಯ ಹದಿನೈದರ ಪ್ರತಿಷ್ಠಿತ ಘಟಕಗಳಲ್ಲಿ ಒಂದಾಗಿ ರುವ ಮತ್ತು ದಶಮಾನೋತ್ಸವ ಸಂಭ್ರಮದಲ್ಲಿರುವ ಜೇಸಿಐ ಉದ್ಯಾವರ ಕುತ್ಪಾಡಿಯ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಭಾಭವನದಲ್ಲಿ ಇತ್ತೀಚೆಗೆ ಜರಗಿತು.

ಪ್ರಸ್ತುತ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಯಾನಂದ ಶೆಟ್ಟಿ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಅವರ ಮೂಲಕ ಪ್ರಮಾಣ ವಚನ ಸ್ವಿಕರಿಸಿ ಅಧಿಕಾರ ಸ್ವೀಕರಿಸಿದರು. ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಸೆನೆಟರ್ ಲೋಕೇಶ್ ರೈ ಶುಭ ಹಾರೈಸಿದರು. ವೇದಿಕೆಯಲ್ಲಿ ಸಲಹೆಗಾರ ವಿಜಯ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

ಜೇಸಿಐ ಉದ್ಯಾವರ ಕುತ್ಪಾಡಿ ಘಟಕದ ಪ್ರಸ್ತುತ ಸಾಲಿನ ಕಾರ್ಯದರ್ಶಿ ಯಾಗಿ ಹರೀಶ್ ಪುತ್ರನ್, ಕೋಶಾಧಿಕಾರಿಯಾಗಿ ರವಿರಾಜ್ ಸಾಲ್ಮರ, ಉಪಾಧ್ಯಕ್ಷರಾಗಿ ಶರತ್ ಕುಮಾರ್, ಜಾಯ್ಲೇಟ್ ಡಿಸೋಜ, ಸುಪ್ರೀತ್ ಸುವರ್ಣ, ಗಿರೀಶ್ ಕುಮಾರ್, ರಾಘವೇಂದ್ರ ಎಂ., ನಿರ್ದೇಶಕರಾಗಿ ಜೊವಿಟ ಕ್ರಾಸ್ತಾ, ಯೋಗೀಶ್ ಕೋಟ್ಯಾನ್, ಪ್ರೇಮ್ ಮಿನೆಜಸ್, ರವಿಕುಮಾರ್, ನವೀನ್ ಕುಮಾರ್ ನೂತನ ಅಧ್ಯಕ್ಷರಿಂದ ಪ್ರಮಾಣವಚನ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಸ್ವಾಗತಿಸಿದರು. ನೂತನ ಕಾರ್ಯದ ರ್ಶಿ ಹರೀಶ್ ಪುತ್ರನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News