×
Ad

ಮುಂದಿನ ಜನವರಿಯಲ್ಲಿ ಸೇನಾ ನೇಮಕಾತಿ ರ್ಯಾಲಿ: ಜಿ.ಜಗದೀಶ್

Update: 2020-03-16 21:13 IST

ಉಡುಪಿ, ಮಾ.16: ಜಿಲ್ಲೆಯಲ್ಲಿ ಎ.4ರಿಂದ 14ರವರೆಗೆ ನಡೆಯಬೇಕಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಮುಂಜಾಗ್ರತಾ ಕ್ರಮವಾಗಿ ಮುಂದೂಡ ಲಾಗಿದೆ. ಈ ರ್ಯಾಲಿಯನ್ನು ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸೇನಾ ನೇಮಕಾತಿ ರ್ಯಾಲಿಯ ಪೂರ್ವಭಾವಿ ಸಭೆ ಯನ್ನುದ್ದೇಶಿಸಿ ಮಾತನಾಡಿದ ಅವರು, ಸೇನಾ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಫೆ.16ರಿಂದ ಮಾರ್ಚ್ 20ರವರೆಗೆ ಅವಕಾಶ ನೀಡಲಾಗಿತ್ತು. ಇದುವರೆಗೂ 31,500 ಮಂದಿ ಅ್ಯರ್ಥಿಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ಕನಿಷ್ಠ 35,000 ಅ್ಯರ್ಥಿಗಳು ನೊಂದಾಯಿಸಲ್ಪಡುವ ಸಾಧ್ಯತೆಗಳಿವೆ ಎಂದರು.

ಕೊರೋನ ವೈರಸ್‌ನ ಹಿನ್ನೆಲೆಯಲ್ಲಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸೇರುವುದು ಅಪಾಯಕಾರಿಯಾಗಿರುವುದರಿಂದ ಎಪ್ರಿಲ್‌ನಲ್ಲಿ ನಡೆಯ ಬೇಕಾಗಿದ್ದ ಸೇನಾ ನೇಮಕಾತಿ ರ್ಯಾಲಿಯನ್ನು ಜನವರಿಗೆ ಮುಂದೂಡಲಾಗಿದೆ. ಉಡುಪಿ ಜಿಲ್ಲೆಯ 85 ಅ್ಯರ್ಥಿಗಳು ಈಗಾಗಲೇ ಹೆಸರು ನೋಂದಾಯಿಸಿ ಕೊಂಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೊಂದಾಯಿಸಿಕೊಳ್ಳುವ ಭರವಸೆ ಇದೆ ಎಂದು ಹೇಳಿದರು.

ರ್ಯಾಲಿಯನ್ನು ಮುಂದೂಡಲಾಗಿದ್ದರೂ, ಆಸಕ್ತ ಅ್ಯರ್ಥಿಗಳು ಮಾರ್ಚ್ 20ರವರೆಗೂ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶವಿದೆ. ಈಗಾಗಲೇ ಹೆಸರು ನೊಂದಾಯಿಸಿಕೊಂಡಿರುವ ಅ್ಯರ್ಥಿಗಳು ಮತ್ತೊಮ್ಮೆ ನೊಂದಾಯಿಸಿಕೊಳ್ಳುವ ಅಗತ್ಯವಿಲ್ಲ. ನೋಂದಾವಣಿ ಪ್ರಕ್ರಿಯೆಯನ್ನು ಅಕ್ಟೋಬರ್ ತಿಂಗಳಲ್ಲಿ 5 ದಿನಗಳವರೆಗೆ ಮತ್ತೊಮ್ಮೆ ತೆರೆಯಲಾಗುವುದು ಎಂದು ಸೇನಾ ನೇಮಕಾತಿ ಅಧಿಕಾರಿ ಕರ್ನಲ್ ಪಿ.ದುಭಾಷ್ ತಿಳಿಸಿದರು.

ಕಾರಣಾಂತರಗಳಿಂದ ಈ ಬಾರಿ ಹೆಸರು ನೊಂದಾಯಿಸಿಕೊಳ್ಳಲಾಗದವರು ಅಕ್ಟೋಬರ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳ ಬಹುದು. ಈಗಾಗಲೇ ನಿಗದಿಯಾಗಿದ್ದ ರ್ಯಾಲಿಗಳು ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಯಥಾಪ್ರಕಾರ ನಡೆಯಲಿರುವುದರಿಂದ ಉಡುಪಿಯಲ್ಲಿ ನಡೆಯಬೇಕಿರುವ ರ್ಯಾಲಿಯನ್ನು ಮುಂದಿನ ವರ್ಷ ಜನವರಿಯಲ್ಲಿ ನಡೆಸಲಾಗುವುದು ಎಂದ ಕರ್ನಲ್ ದುಭಾಷ್, ರ್ಯಾಲಿಯ ಪೂರ್ವಸಿದ್ದತೆಗಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸಿ, ಇದೆ ರೀತಿಯ ಸಹಕಾರ ಮುಂದಿನ ದಿನಗಳಲ್ಲಿಯೂ ದೊರೆಯ ಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಎಎಸ್‌ಪಿ ಕುಮಾರ್‌ಚಂದ್ರ, ಡಿಡಿಪಿಐ ಶೇಷಶಯನ ಕಾರಿಂಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News