ಕೊರೊನಾವೈರಸ್: ಕೊರತೆ ನೀಗಿಸಲು ಕೈದಿಗಳಿಂದ ಫೇಸ್ ಮಾಸ್ಕ್ ತಯಾರಿಸುತ್ತಿರುವ ಕೇರಳ ಸರಕಾರ

Update: 2020-03-16 16:08 GMT

ಹೊಸದಿಲ್ಲಿ: ಕೊರೊನಾವೈರಸ್ ಸೋಂಕಿನ ಹಲವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್‍ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಅವುಗಳ ಪೂರೈಕೆಯಲ್ಲಾಗಿರುವ ವ್ಯತ್ಯಯವನ್ನು ಮನಗಂಡಿರುವ ಕೇರಳ ಸರಕಾರ ರಾಜ್ಯದ ಕಾರಾಗೃಹಗಳಲ್ಲಿರುವ ಕೈದಿಗಳ ಮೂಲಕ ಫೇಸ್ ಮಾಸ್ಕ್ ತಯಾರಿಗೆ ಆದೇಶಿಸಿದೆ.

ಈಗಾಗಲೇ ಈ ರೀತಿ ತಿರುವನಂತಪುರಂನಲ್ಲಿನ ಕಾರಾಗೃಹದಲ್ಲಿನ ಕೈದಿಗಳು ತಯಾರಿಸಿದ ಮೊದಲ ಬ್ಯಾಚ್ ಮಾಸ್ಕ್‍ ಗಳ ಚಿತ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೇರ್ ಮಾಡಿ ಟ್ವೀಟ್ ಮಾಡಿದ್ದಾರೆ. ಕೇರಳ ಸರಕಾರದ ಈ ಕ್ರಮಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News