×
Ad

ಪ್ರತ್ಯೇಕ ಪ್ರಕರಣ: ನಾಲ್ವರ ಆತ್ಮಹತ್ಯೆ

Update: 2020-03-16 21:58 IST

ಮಣಿಪಾಲ, ಮಾ.16: ಸಾಲದ ವಿಚಾರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಡು ಅಲೆವೂರು ದುರ್ಗಾನಗರದ ರಾಘವೇಂದ್ರ (48) ಎಂಬ ವರು ಮಾ.14ರಂದು ಸಂಜೆ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ: ವಿಪರೀತ ಮಧ್ಯಪಾನ ಸೇವಿಸುವ ಚಟ ಹೊಂದಿದ್ದ ಸಾಲಿಕೇರಿ ನಿವಾಸಿ ಗಣೇಶ ಪೂಜಾರಿ(43) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.13ರಿಂದ ಮಾ.15ರ ಮಧ್ಯಾವಧಿಯಲ್ಲಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ:  ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಉಳಿಯಾರಗೋಳಿ ಗ್ರಾಮದ ಶಂಕರ ಶೆಟ್ಟಿ(66) ಎಂಬವರು ಕಾಲು ನೋವು ಹಾಗೂ ಮಕ್ಕಳು ಇಲ್ಲದ ಕೊರಗಿನಿಂದ ನೊಂದು ಮಾ.15ರಂದು ಸಂಜೆ ವೇಳೆ ಶಿರ್ವ ಮಟ್ಟಾರು ಪಾಪನಾಶಿನಿ ಹೊಳೆಯ ನಡಿಬೆಟ್ಟು ಅಣೆಕಟ್ಟು ಬಳಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ಪಾರ್ಶ್ವವಾಯು ಮತ್ತು ಹೃದಯರೋಗ ಸಮಸ್ಯೆಯಿಂದ ಬಳಲುತ್ತಿದ್ದ ಮಯ್ಯಿಡಿ ನಿವಾಸಿ ನಾರಾಯಣ(67) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.15ರಂದು ಸಂಜೆ ವೇಳೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News