ಕಾಪು: ನಾಲ್ವರು ಕಳವು ಆರೋಪಿಗಳು ಸೆರೆ
Update: 2020-03-16 22:46 IST
ಕಾಪು : ಮಣಿಪುರದ ದೆಂದೂರುಕಟ್ಟೆಯ ಬಾರೊಂದರಲ್ಲಿ ಕಳೆದ ತಿಂಗಳು ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಬಿಜಾಪುರದ ಮುದ್ದೆಬಿಹಾಳ ತಾಲೂಕಿನ ಹೆಜ್ಜೇರಿಯ ರಮೇಶ್ ವಡ್ಡೆರ್ (30), ಬಾಗಲಕೋಟೆಯ ಬಿಲ್ಕೆನೂರುವಿನ ವಿಜಯ ಹುಲಗಪ್ಪ ವಡ್ಡರ್ (30), ಹಳೆ ಗೋವಾದ ಚರ್ಚ್ ರೋಡ್ ಕ್ಯಾಂತೆಭಟ್ ನಿವಾಸಿ ನೂರ್ ಮಹಮ್ಮದ್ ಶೇಖ್ (45), ಶೃಂಗೇರಿಯ ಬೆಳಂದೂರು ಹೊನ್ನಾಳಿಯ ರವಿ (33). ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತರಿಂದ ಆರೋಪಿಗಳಿಂದ ಕಳವು ಮಾಡಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.