ಪಡುಬಿದ್ರಿ: ಗೇಟ್ ಹಾಕಿದಕ್ಕೆ ರೈಲ್ವೇ ಸಿಬ್ಬಂದಿಗೆ ಹಲ್ಲೆ
Update: 2020-03-16 22:51 IST
ಪಡುಬಿದ್ರಿ : ರೈಲು ಬರುವು ಮುನ್ಸೂಚನೆಯಿಂದ ರೈಲು ಗೇಟ್ ಹಾಕಿದಕ್ಕೆ ಗೇಟ್‍ಮ್ಯಾನ್‍ಗೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ಪಾದೆಬೆಟ್ಟುವಿನ ಉಳ್ಳೂರು ಎಂಬಲ್ಲಿ ನಡೆದಿದೆ.
ಕೊರಂಗ್ರಪಾಡಿಯ ಮಾರ್ಪಳ್ಳಿಯ ಉಮೇಶ್ ಎಂಬವರು ಹಲ್ಲೆಗೊಳಗಾದವರು. ಇವರು ಕೊಂಕಣ ರೈಲ್ವೇಯಲ್ಲಿ ಗೇಟ್‍ಮ್ಯಾನ್ ಆಗಿ ಪಾದೆಬೆಟ್ಟು ಗ್ರಾಮದಲ್ಲಿ ಸೇವೆ ಸಲ್ಲಿಸುತಿದ್ದಾರೆ. ರವಿವಾರ ರಾತ್ರಿ ಕರ್ತವ್ಯದಲ್ಲಿದ್ದಾಗ ಮಂಗಳೂರಿನಿಂದ ಮುಂಬೈ ಕಡೆಗೆ ಹೋಗುವ ಎಕ್ಸ್ ಪ್ರೆಸ್ ರೈಲು ಬರುವ ಕಾರಣ ಗೇಟ್ ಹಾಕುವಂತೆ ಆದೇಶ ಬಂದ ಮೇರೆಗೆ ಗೇಟ್ ಹಾಕಿದ್ದರು. ಇದೇ ವೇಳೆ ಆಟೋ ರಿಕ್ಷಾ ಚಾಲಕ ಆದಿತ್ಯ ಎಂಬವರು ಉಳ್ಳೂರು ಕಡೆಯಿಂದ ಪಾದೆಬೆಟ್ಟು ಕಡೆಗೆ ಹೋಗಲು ಬಂದು ಗೇಟ್ ತೆಗೆಯುವಂತೆ ಹೇಳಿದರು. ಗೇಟ್ ತೆಗೆಯಲು ನಿರಾಕರಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಪಡುಬಿದ್ರಿ ಠಾಣೆಗೆ ದೂರು ನೀಡಲಾಗಿದೆ.