×
Ad

ಕಂಚಿನಡ್ಕದಲ್ಲಿ ಸಾಮೂಹಿಕ ವಿವಾಹ

Update: 2020-03-16 22:55 IST

ಪಡುಬಿದ್ರಿ: ಇಲ್ಲಿನ ಕಂಚಿನಡ್ಕದ ಮುಸ್ಲಿಮ್ ವೆಲ್‍ಫೇರ್ ಎಸೋಸಿಯೇಶನ್ ಇದರ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಸಮಾರಂಭದಲ್ಲಿ 2 ಬಡ ಜೋಡಿ ವಿವಾಹ ನೆರವೇರಿತು. ವಧುವಿಗೆ ಚಿನ್ನಾಭರಣ ಹಾಗೂ ವಸ್ತ್ರಗಳನ್ನು ನೀಡಲಾಯಿತು. ವರನಿಗೆ ವಸ್ತ್ರ ಹಾಗೂ ವಾಚ್ ನೀಡಲಾಯಿತು.

ಸಯ್ಯದ್ ಜಅಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ನಿಖಾ ನೇತೃತ್ವ ವಹಿಸಿ ಬಡ ಹೆಣ್ಣು ಮಕ್ಕಳ ವಿವಾಹಕ್ಕೆ ನೆರವಾಗುವುವುದ ಪುಣ್ಯದ ಕಾರ್ಯವಾಗಿದೆ. ಈ ಮೂಲಕ ಸಂಘಟನೆಯು ಇನ್ನಷ್ಟು ಸೇವೆ ಸಮಾಜಕ್ಕೆ ನೀಡುವಂತಾಗಬೇಕು ಎಂದು ಹಾರೈಸಿದರು.

ಪಡುಬಿದ್ರಿ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಪಿ.ಕೆ.ಮುಹಿಯುದ್ದೀನ್  ಅಧ್ಯಕ್ಷತೆ ವಹಿಸಿದ್ದರು. ಖತೀಬ್ ಎಸ್.ಎಂ.ಅಬ್ದುರ್ರಹ್ಮಾನ್ ಮದನಿ ದುವಾ ನೆರವೇರಿಸಿದರು. ಕಂಚಿನಡ್ಕ ಮಸೀದಿ ಖತೀಬ್ ಅಬ್ದಲ್ ಲತೀಫ್ ಮದನಿ, ಮೌಲಾನಾ ಮುಹಮ್ಮದ್ ಇಕ್ಬಾಲ್ ನೂರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‍ ಚಂದ್ರ ಸುವರ್ಣ, ಮುಸ್ಲಿಮ್ ವೆಲ್‍ಫೇರ್ ಅಸೋಸಿಯೇಶನ್ ಅಧ್ಯಕ್ಷ ಕೆ. ಇಸ್ಮಾಯಿಲ್, ಗ್ರಾಮ ಪಂ. ಸದಸ್ಯರಾದ ಹಸನ್ ಬಾವ, ಬುಡಾನ್ ಸಾಹೇಬ್, ಮಯ್ಯದ್ದಿ, ಉದ್ಯಮಿ ಹಂಝ ಕಂಚಿನಡ್ಕ, ರಮೀಝ್ ಹುಸೈನ್, ಅಹ್ಮದ್ ಬಾವ, ಬಶೀರ್, ಎಮ್.ಎಸ್. ಖಲಂದರ್ ಶಫಿ, ಮಸೀದಿಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೆ. ಅಬ್ದುಲ್ ರಹೀಮ್, ಪಿಎಫ್‍ಐ ಉಚ್ಚಿಲ ಡಿವಿಜನ್ ಅಧ್ಯಕ್ಷ ಹನೀಫ್ ಮೂಳೂರು, ಖಲಂದರ್ ಶಾಫಿ ಬಿ.ಸಿ. ರೋಡ್, ಹಾಜಿ ಎಮ್.ಎಚ್. ಹಮ್ಮಬ್ಬ, ಇಕ್ಬಾಲ್ ಕಂಚಿನಡ್ಕ, ಶಂಶುದ್ದೀನ್ ಉಪಸ್ಥಿತರಿದ್ದರು. ಜುನೈದ್ ಉಚ್ಚಿಲ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ರಝಾಕ್ ಕಂಚಿನಡ್ಕ ವಂದಿಸಿದರು. ಕಾರ್ಯದರ್ಶಿ ಸಫ್ವಾನ್ ವರದಿ ವಾಚಿಸಿದರು.

ಈ ಸಂದರ್ಭ ಪಡುಬಿದ್ರಿ ಜುಮಾ ಮಸೀದಿಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಾಜಿ ಫಾರೂಕ್ ಹಾಗೂ ನೂರುಲ್ ಹುದಾ ಮದ್ರಸದಲ್ಲಿ ಸದರ್ ಉಸ್ತಾದ್ ಆಗಿ ಸೇವೆ ಸಲ್ಲಿಸಿದ ಅಶ್ರಫ್ ಸಅದಿ ಅವರನ್ನು ಸನ್ಮಾನಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News